ತಮಿಳುನಾಡಿನ ದೇವಸ್ಥಾನಗಳಲ್ಲಿ ಮೊಬೈಲ್ ಬಳಸುವಂತಿಲ್ಲ – ಮದ್ರಾಸ್ ಹೈಕೋರ್ಟ್

ತಮಿಳುನಾಡಿ ( THAMILNADU ) ನಾದ್ಯಂತ ದೇವಸ್ಥಾನಗಳ ಒಳಭಾಗದಲ್ಲಿ ಮೊಬೈಲ್ ಫೋನ್ ಬಳಸುವಂತಿಲ್ಲ ಎಂದು ಮದ್ರಾಸ್ ಹೈ ಕೋರ್ಟ್ ( MADRAS HIGH COURT ) ಆದೇಶಿಸಿದೆ.

ತಮಿಳುನಾಡಿ ( THAMILNADU ) ನಾದ್ಯಂತ ದೇವಸ್ಥಾನಗಳ ಒಳಭಾಗದಲ್ಲಿ ಮೊಬೈಲ್ ಫೋನ್ ಬಳಸುವಂತಿಲ್ಲ ಎಂದು ಮದ್ರಾಸ್ ಹೈ ಕೋರ್ಟ್ ( MADRAS HIGH COURT ) ಆದೇಶಿಸಿದೆ.

ತಮಿಳುನಾಡಿನ ದೇವಸ್ಥಾನಗಳಲ್ಲಿ ಇನ್ನುಮುಂದೆ ಭಕ್ತರು ಮೊಬೈಲ್ ಫೋನ್ ಬಳಸುವಂತಿಲ್ಲ - Madras  High Court Bans Mobile Phones Across Tamil Nadu Temples Kannada News| TV9  Kannada

ದೇವಾಲಯಗಳಿಗೆ ಬರುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತು ಪೂಜಾ ಸ್ಥಳಗಳ ಶುದ್ಧತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ಮೊಬೈಲ್ ಫೋನ್ ನಿಷೇಧಿಸಲು ಮುಂದಾಗಿದ್ದೇವೆ ಎಂದು ಕೋರ್ಟ್ ತಿಳಿಸಿದೆ. ನ್ಯಾಯಮೂರ್ತಿಗಳಾದ ಆರ್.ಮಹದೇವನ್ ಮತ್ತು ಜೆ ಸತ್ಯನಾರಾಯಣ ಪ್ರಸಾದ್ ಅವರ ವಿಭಾಗೀಯ ಪೀಠ ದೇವಸ್ಥಾನಗಳ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಮೊಬೈಲ್ ನಿಷೇಧಿಸುವ ಮಹತ್ವದ ಆದೇಶ ನೀಡಿದೆ. ದೇವಸ್ಥಾನಗಳಿಗೆ ಭಕ್ತರು ಭಕ್ತಿಪೂರ್ವಕವಾಗಿ ಭೇಟಿ ನೀಡುವ ವೇಳೆ ಮೊಬೈಲ್ ಬಳಕೆಯಿಂದಾಗಿ ಹಲವು ಸಮಸ್ಯೆಗಳು ಉಂಟಾಗುತ್ತಿದೆ. ಇದನ್ನೂ ಓದಿ : – ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 15 ಲಕ್ಷ ಪರಿಹಾರ ಘೋಷಿಸಿದ ಸಿಎಂ

Temple treasures of Tamil Nadu - EducationWorld

ಹಾಗಾಗಿ ತಮಿಳುನಾಡಿನ ಅನೇಕ ಪ್ರಸಿದ್ಧ ದೇವಾಲಯಗಳನ್ನು ನಿರ್ವಹಿಸುತ್ತಿರುವ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತರಿಗೆ ನ್ಯಾಯಾಧೀಶರು ದೇವಾಲಯದ ಒಳಗೆ ಮೊಬೈಲ್ ( MOBILE ) ಫೋನ್ ಬಳಕೆಯನ್ನು ನಿಷೇಧಿಸುವಂತೆ ಸೂಚಿಸಿದರು. ತಮಿಳುನಾಡಿನಾದ್ಯಂತ ದೇವಸ್ಥಾನಗಳಲ್ಲಿ ಜನರಿಗೆ ತೊಂದರೆಯಾಗದಂತೆ ಫೋನ್ ಠೇವಣಿ ಲಾಕರ್ಗಳನ್ನು ಅಳವಡಿಸಬೇಕು. ಈ ಆದೇಶವನ್ನು ಸಮರ್ಪಕವಾಗಿ ಜಾರಿಗೆ ತರಲು ದೇವಾಲಯಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ಸಹ ನೇಮಿಸಬೇಕು ಎಂದು ಆದೇಶಿಸಿದೆ.

ಇದನ್ನೂ ಓದಿ : – ಸಿಎಂ ಬೊಮ್ಮಾಯಿಗೆ ನೈತಿಕತೆ ಎನ್ನುವುದಿದ್ದರೆ ಆರೋಗ್ಯ ಸಚಿವರನ್ನು ಕೂಡಲೇ ಸಂಪುಟದಿಂದ ಕಿತ್ತೊಗೆಯಬೇಕು – ಹೆಚ್.ಡಿ ಕುಮಾರಸ್ವಾಮಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!