ಮೋದಿಯವ್ರು ಬೆಂಗಳೂರು ಮೈಸೂರಿಗೆ ಭೇಟಿ ಕೊಡಲಿದ್ದಾರೆ. ಈ ಕಾರ್ಯಕ್ರಮ ಅಚ್ಚುಕಟ್ಟಾಗಬೇಕು ಎಂಬುದರಿಂದ ನಮ್ಮ ಸಚಿವರು ಹಾಗೂ ಶಾಸಕರು ಶ್ರಮವಹಿಸುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಅಧಿಕಾರಿಗಳು ಸಹ ಬಹಳ ಸಹಕಾರ ನೀಡುತ್ತಿದ್ದಾರೆ. ಸೆಕ್ಯುರಿಟಿ ದೃಷ್ಟಿಯಿಂದ SPG ಯವ್ರ ಮಾರ್ಗದರ್ಶನದಲ್ಲಿ ಎಲ್ಲಾ ತಯಾರಿಗಳು ನಡೆಯುತ್ತಿದೆ ಎಂದು ಹೇಳಿದರು.
ಇದೇ ವೇಳೆ ಸಬ್ ಅರ್ಬನ್ ರೈಲು 15 ಕೋಟಿ ವೆಚ್ಚದ ಯೋಜನೆಗೆ ಅಡಿಗಲ್ಲು ಹಾಕಲು ಮೋದಿಯವ್ರು ಬರ್ತಿದ್ದಾರೆ. ಎಲ್ಲಿ ಮೆಟ್ರೋ ಇಲ್ಲ ಅಲ್ಲಿಗೆ ತುಂಬಾ ಸಹಾಯಕವಾಗುತ್ತದೆ. ಹಲವಾರು ರೈಲು ಯೋಜನೆಗೆ ಚಾಲನೆ ಸಿಗ್ತಾ ಇದೆ. 6 ಯೋಜನೆಗೆ ಚಾಲನೆ ಸಿಗ್ತಾ ಇದೆ. ಹಲವಾರು ದೂರದೃಷ್ಟಿಯಿಂದ ಬೆಂಗಳೂರು ಹೊರವಲಯದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ.ಅಂಬೇಡ್ಕರ್ ಎಕಾನಾಮಿಕ್ಸ್ ಸೂಲ್ಕ್ ಉದ್ಘಾಟನೆ ಮಾಡಲಿದ್ದಾರೆ. ನಂತ್ರ ಬೆಂಗಳೂರಿನಿಂದ ಮೈಸೂರಿಗೆ ತೆರಳಿ ಸುತ್ತೂರು ಮಠ ಹಾಗು ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿದ್ದಾರೆ ನಂತರ ಮರುದಿನ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ : – ಅಗ್ನಿಪಥ್ ವಿರೋಧಿಸಿ ಇಂದು ಬಿಹಾರ್ ಬಂದ್
ಕೋವಿಡ್ ಟೆಸ್ಟ್ ಗೊಂದಲ ವಿಚಾರ
ಒಳಾಂಗಣ ಸಮಾರಂಭದಲ್ಲಿ ಭಾಗವಹಿಸುವವರು ಕೋವಿಡ್ ಟೆಸ್ಟ್ ಮಾಡಿಸಬೇಕು. ಆದರೆ ಹೊರಾಂಗಣ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಯಾವುದೇ ಟೆಸ್ಟ್ ಕಡ್ಡಾಯ ಮಾಡಿಲ್ಲ. ನಾನೂ ಕೂಡ ಕೋವಿಡ್ ಟೆಸ್ಟ್ ಮಾಡಿಸ್ತೇನೆ ಸಚಿವರೂ ಕೂಡ ಕೋವಿಡ್ ಟೆಸ್ಟ್ ಮಾಡಿಸ್ತಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ : – ಮೋದಿ ತಾಯಿಗೆ 100ರ ಸಂಭ್ರಮ –ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಪ್ರಧಾನಿ