ಪಂಚರಾಜ್ಯ ಚುನಾವಣೆ (Pancharajya election) ಬಳಿಕ ಪ್ರಧಾನಿ ಮೋದಿ (Narendra modi) ಗುಜರಾತ್ (Gujrath) ನಲ್ಲಿ ಚುನಾವಣೆ ಟ್ರೆಂಡ್ ಸೆಟ್ ಮಾಡಿದ್ದಾರೆ. ಡಿಸೆಂಬರ್ ನಲ್ಲಿ ಗುಜರಾತ್ ಅಸೆಂಬ್ಲಿ ಚುನಾವಣೆ ಆರಂಭವಾಗಲಿದೆ.
ಇದೀಗ ಗುಜರಾತ್ ಬಳಿಕ ಕರ್ನಾಟಕದತ್ತಾ ಮೋದಿ ಚಿತ್ತಾ. ಕರ್ನಾಟಕದಲ್ಲಿ ಪಾಲಿಕೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆ ಟ್ರೆಂಡ್ ಸೆಟ್ ಮಾಡಲು ಮೋದಿ ಪ್ಲಾನ್ ಮಾಡಿದ್ದಾರೆ. ಜೂನ್ ತಿಂಗಳಲ್ಲೇ ರೋಡ್ ಶೋ ಮೂಲಕ ಚುನಾವಣೆ ಹವಾ ಕ್ರಿಯೆಟ್ ಮಾಡಲು ಬಿಜೆಪಿ ಪ್ಲಾನ್ ಮಾಡಿದೆ. ಬೆಂಗಳೂರು ಹಾಗೂ ಮೈಸೂರು ಭಾಗದಲ್ಲಿ ಪ್ರಧಾನಿ ಮೋದಿ ಪ್ರವಾಸ ಮಾಡಲಿದ್ದಾರೆ. ಈ ಮೂಲಕ ಹಳೆ ಮೈಸೂರು ಭಾಗದ ಆರಂಭದಲ್ಲಿ ರಾಜ್ಯ ನಾಯಕರು ಮೋದಿ ಮೂಲಕ ಅಖಾಡ ಸಜ್ಜುಗೊಳಿಸುತ್ತಿದ್ದಾರೆ. ಬೆಂಗಳೂರಲ್ಲಿ ಒಟ್ಟು 12 ಕಿಲೋ ಮೀಟರ್ ರೋಡ್ ಶೋಗೆ ಸಿದ್ದತೆ ನಡೆಸಿದ್ದಾರೆ. ಜೂನ್ 20 ಕ್ಕೆ ಪ್ರಧಾನಿಯಿಂದ ರೋಡ್ ಶೋ ನಡೆಯಲಿದೆ. ಒಂದು ಕಡೆ ಸಾರ್ವಜನಿಕ ಸಭೆ, ಹಾಗೂ ಇನ್ನೆರಡು ಕಡೆ ರೋಡ್ ಶೋಗೆ ಅಗತ್ಯ ಸಿದ್ಧತೆ ನಡೆದಿದೆ. ಜೂನ್21 ರಂದು ಮೈಸೂರು ಜಿಲ್ಲೆಯಲ್ಲಿ ಚುನಾವಣೆ ಅಖಾಡಕ್ಕೆ ಸಜ್ಜುಗೊಳಿಸಿದ್ದಾರೆ. ಪಂಚ ರಾಜ್ಯ ಮಾದರಿಯಲ್ಲೇ ಗುಜರಾತ್ ಹಾಗೂ ಕರ್ನಾಟಕದಲ್ಲಿ ಮೋದಿ ರ್ಯಾಲಿ ಮೂಲಕ ಚುನಾವಣೆ ಅಖಾಡಕ್ಕೆ ಸಿದ್ಧತೆ ನಡೆದಿದೆ. ಇದನ್ನೂ ಓದಿ : – EDಯಿಂದ ರಾಹುಲ್ ಗಾಂಧಿ ವಿಚಾರಣೆ – ನಾಳೆ ಕಾಂಗ್ರೆಸ್ ಮುಖಂಡರಿಂದ ರಾಜಭವನ ಮುತ್ತಿಗೆ