ಕಳೆದ 2 ತಿಂಗಳಿನಿಂದ ಕೆಲ ಹಿಂದೂ ಸಂಸ್ಥೆಗಳು ಸಮಾಜದ ಶಾಂತಿ ಕದಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದಲ್ಲಿ ಜಿಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ. ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಜಾಬ್ ನಿಂದ ಹಿಡಿದು ಚಿನ್ನ ಬೆಳ್ಳಿ ಅಂಗಡಿಗೆ ಬಂದಿದೆ. ಕೋಮು ಸೌಹಾರ್ದ ಕದಡುವ ಪ್ರಯತ್ನವನ್ನ ಹಿಂದೂ ಸಂಘಟನೆಗಳು ಮಾಡಿದ್ದಾರೆ. ಚಿನ್ನ ಬೆಳ್ಳಿ ವ್ಯಾಪಾರಸ್ಥರಲ್ಲಿ ಮುಸಲ್ಮಾನರೇ ಹೆಚ್ಚಿನವರಿದ್ದಾರೆ. ಇದರಿಂದ ಹಿಂದೂ ರಾಷ್ಟ್ರ ಮಾಡ್ತೇವೆ. ಸಂಪೂರ್ಣವಾಗಿ ಬಿಜೆಪಿ ಯನ್ನು ತರುತ್ತೇವೆ ಅಂತ ಹೊರಟಿದ್ದಾರೆ. ಇದನ್ನೂ ಓದಿ :- ಸೋಂಕಿತ ಪ್ರಕರಣ ಬೆಂಗಳೂರಿನಲ್ಲಿ ಹೆಚ್ಚಾಗಿದೆ – ಡಾ.ಕೆ. ಸುಧಾಕರ್
ಆದ್ರೆ ಅವರ ಗ್ರಾಫ್ಸ್ ಕರ್ನಾಟಕದಿಂದ ಕಡಿಮೆ ಆಗ್ತಿದೆ. ಕೂಡಲೇ ರಾಜ್ಯ ಸರ್ಕಾರ ಈ ಬಗ್ಗೆ ಎಚ್ಚರಿಕೆ ವಹಿಸಬೇಕು, ಇಲ್ಲದಿದ್ರೆ ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲಿಗೆ ಕರ್ನಾಟಕದಲ್ಲಿ ಜನ ಬೀಗ ಜಡಿತ್ತಾರೆ. ಹುಬ್ಬಳ್ಳಿಯಲ್ಲಿ ಗಲಾಟೆ ಆಗಿದ್ದು, ರಾಜ್ಯ ಸರ್ಕಾರ ತಕ್ಷಣ ಇದಕ್ಕೆ ತೆರೆ ಎಳೆಯಬೇಕು ಎಂದ್ರು. ಇನ್ನು ಭವಾನಿ ರೇವಣ್ಣ ಸಕ್ರಿಯ ರಾಜಕಾರಣದಲ್ಲಿ ಇದ್ದಾರೆ.
ಜಿ.ಪಂ ಸದಸ್ಯರಾಗಿ ಕೆಲಸ ಮಾಡಿದ್ದಾರೆ, ಹಾಸನ ದಲ್ಲಿ ಟಿಕೆಟ್ ನೀಡುವ ಬಗ್ಗೆ ಇನ್ನೂ ನಿರ್ಣಯ ಆಗಿಲ್ಲ. ನಿಷ್ಠಾವಂತ ಮಾಜಿ ಶಾಸಕ ಪ್ರಕಾಶ್ ಅವರ ಕುಟುಂಬದವರಿಗೆ ನೀಡಬೇಕು ಅನ್ನೋ ಅಭಿಪ್ರಾಯವಿದೆ. ಇದ್ರ ಜೊತೆಗೆ ಜನಾಭಿಪ್ರಾಯದ ವಿರುದ್ಧ ಹೋಗುವ ಪ್ರಶ್ನೆ ಇಲ್ಲ. ಯಾರಿಗೆ ಟಿಕೆಟ್ ನೀಡಬೇಕು ಅಂತ ಪಕ್ಷ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದ್ರು.
ಇದನ್ನೂ ಓದಿ :- ನ್ಯಾಯಕ್ಕಾಗಿ ನೀರಿನ ಟ್ಯಾಂಕ್ ಏರಿ ಕುಳಿತ ಕುಟುಂಬ