ಕುಣಿಗಲ್ ತಾಲೂಕಿನ ಅವರೆಗೆರೆಯಲ್ಲಿ ವಿಲಕ್ಷಣ ಘಟನೆಯೊಂದು ನಡೆಯುವ ಸಾಧ್ಯತೆ ಇದೆಯಂತೆ. ಅವರೆಗೆರೆಯ ನಿವಾಸಿ ಲಕ್ಷ್ಮೀ ಎಂಬಾಕೆ ಸ್ವತಃ ತನ್ನ ಮಗಳು ಹರಿಣಿಯನ್ನು ನಿಧಿ ಆಸೆಗಾಗಿ ಬಲಿಕೊಡಲು ಮುಂದಾಗಿದ್ದಾಳಂತೆ. ಹೀಗಂತ ಸ್ವತಃ ಹರಿಣಿಯೇ ಪೊಲೀಸರಿಗೆ ದೂರು ನೀಡಿದ್ದಾಳೆ. ಅವರೆಗೆ ಗ್ರಾಮದಲ್ಲಿ ಲಕ್ಷ್ಮೀ ಕುಟುಂಬಕ್ಕೆ ಸೇರಿದ ಜಮೀನಿದೆ. ಅದರಲ್ಲಿ ಒಂದು ಹುತ್ತ ಇದೆಯಂತೆ. ಆ ಹುತ್ತಕ್ಕೆ ಹತ್ತಾರು ವರ್ಷಗಳಿಂದ ಲಕ್ಷ್ಮಿ ಕುಟುಂಬ ಪೂಜೆ ಸಲ್ಲಿಸಿಕೊಂಡು ಬಂದಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷದ ಹಿಂದೆ ಹುತ್ತ ಅಗೆದಾಗ ದೇವರ ವಿಗ್ರಹ, ಬೆಳ್ಳಿ ನಾಣ್ಯಗಳು ಸಿಕ್ಕಿತ್ತಂತೆ. ಆ ಹುತ್ತದಲ್ಲಿ ಇನ್ನೂ ಚಿನ್ನದ ನಾಣ್ಯಗಳಿದ್ದು ಮಗಳನ್ನು ಬಲಿ ಕೊಟ್ಟರೆ ನಾಣ್ಯ ಸಿಗಲಿದೆ ಎಂದು ತಮಿಳುನಾಡಿನ ಮಾಂತ್ರಿಕನೋರ್ವ ಲಕ್ಷ್ಮಿಗೆ ತಿಳಿಸಿದ್ದಾನಂತೆ. ಮಾಂತ್ರಿಕನ ಮಾತು ಕೇಳಿಕೊಂಡು ನಿಧಿ ಆಸೆಗಾಗಿ ಲಕ್ಷ್ಮೀ ತನ್ನ ಮಗಳು ಹರಿಣಿ ಮೇಲೆ ಮಾಟ ಮಂತ್ರ ಮಾಡಿಸಿದ್ದಾಳಂತೆ. ಅಮವಾಸೆ, ಹುಣ್ಣಿಮೆ ಬಂದಾಗ ಹುತ್ತದ ಬಳಿ ಕರೆದುಕೊಂಡು ಹೋಗುದನ್ನು ಮಾಡುತ್ತಾಳಂತೆ. ತಾಯಿಯ ಈ ವರ್ತನೆಯಿಂದ ಭಯಭೀತಳಾದ ಹರಿಣಿ ತನ್ನ ರಕ್ಷಣೆ ಮಾಡುವಂತೆ ಪೊಲೀಸರ ಮೊರೆ ಹೋಗದ್ದಾಳೆ.
ಹರಿಣಿ ಈಗಾಗಲೇ ಕಾರ್ತೀಕ್ ಎನ್ನುವವರ ಜೊತೆ ಮದುವೆಯಾಗಿದ್ದಾಳೆ. ಇವರಿಗೆ ಒಂದು ಮಗು ಕೂಡ ಇದೆ. ಆದರೂ ತಮ್ಮ ತಾಯಿ ತನ್ನನ್ನು ಬಲಿಕೊಡಲು ಮುಂದಾಗಿದ್ದಾಳೆ ಎಂದು ಆರೋಪಿಸುತ್ತಾಳೆ. ಲಕ್ಷ್ಮೀ ಕೊಟ್ಟ ದೂರನ್ನು ಸ್ವೀಕರಿಸಿದ ತುಮಕೂರು ಎಸ್ಪಿ ರಾಹುಲ್ ಕುಮಾರ್ ತನಿಖೆಗಾಗಿ ಮಹಿಳಾ ಠಾಣೆಗೆ ದೂರನ್ನು ವರ್ಗಾಯಿಸಿದ್ದಾರೆ. ಅಮವಾಸೆ, ಹುಣ್ಣಿಮೆ ದಿನ ಹರಿಣಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತಿದ್ದು, ತಾಯಿ ಲಕ್ಷ್ಮೀ ಮಾಟ ಮಂತ್ರ ಮಾಡಿಸಿದ್ದಾಳೆ ಎಂದು ಆರೋಪಿಸುತ್ತಾಳೆ. ಅತ್ತ ಅಳಿಯ ಕಾತೀಕ್ ನನ್ನೂ ಕೊಲೆ ಮಾಡಲು ಯತ್ನಿಸಿದ್ದರಂತೆ.
ಹರಿಣಿ 8ನೇ ತರಗತಿ ಓದುತಿದ್ದಾಗಲೇ ನಿಧಿಗಾಗಿ ಕೊಲೆ ಮಾಡಲು ಪ್ರಯ್ನಿಸಿದ್ದರಂತೆ. ಆದರೆ ಹರಿಣಿ ತಪ್ಪಿಸಿಕೊಂಡಿದ್ದಳಂತೆ. ಮುದುವೆಯಾದರೆ ಗಂಡನಿಂದ ತನಗೆ ರಕ್ಷಣೆ ದೊರೆಯಬಹದು ಎಂದು ಪ್ರೀತಿಸಿ ಕಾತೀಕ್ ನನ್ನು ಮದುವೆಯಾಗಿದ್ದಾಳೆ. ಈಗ ಹರಿಣಿ ಸೇರಿದಂತೆ ಗಂಡ ಮತ್ತು ಮಗುವನ್ನೂ ಕೊಲೆ ಮಾಡಲು ಸಂಚುರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣ ಎಷ್ಟರಮಟ್ಟಿಗೆ ನಿಜವೋ ಸುಳ್ಳೋ ಅನ್ನೋದು ಪೊಲೀಸ್ ತನಿಖೆಯಿಂದ ಮಾತ್ರ ಗೊತ್ತಾಗಬೇಕಾಗಿದೆ.