ಮಹಾರಾಷ್ಟ್ರದ ಬೀಚ್ ಬಳಿ (Maharastra beach) ಸ್ಫೋಟಕ, ಬಂದೂಕು (GUNS) ಗಳಿದ್ದ ಶಂಕಿತ ಬೋಟ್ ಪತ್ತೆಯಾಗಿದೆ. ಮಹಾರಾಷ್ಟ್ರದ ರಾಯಗಡ (Raigad) ಜಿಲ್ಲೆಯ ಹರಿಹರೇಶ್ವರ ಬೀಚ್ (Harihareshwara beach) ನಲ್ಲಿ ಪತ್ತೆಯಾಗಿರುವ ಅನುಮಾನಾಸ್ಪದ ಬೋಟ್‌ನಲ್ಲಿ 3 ಎಕೆ–47 ರೈಫಲ್ (Rifel), ಬುಲೆಟ್ (Bullet) ಗಳು ಪತ್ತೆಯಾಗಿವೆ.
ಮುಂಬೈ (Mumbai) ನಿಂದ 190 ಕಿ.ಮೀ ದೂರದ ಶ್ರೀವರ್ಧನ್ ಪ್ರದೇಶದಲ್ಲಿ ಯಾವುದೇ ಸಿಬ್ಬಂದಿ ಇಲ್ಲದ ಹಡಗನ್ನು ಕಂಡ ಸ್ಥಳೀಯರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ರಾಯಗಡದ ಎಸ್‌ಪಿ ಅಶೋಕ್ ದುಧೆ (Ashok dhude) ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಡಗಿನ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ, ಹಡಗಿನಲ್ಲಿ 3 ಎಕೆ– 47 ರೈಫಲ್ಸ್ ಮತ್ತು ಬುಲೆಟ್‌ಗಳು ಪತ್ತೆಯಾಗಿವೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ. ಈ ಹಡಗಿನ ಸಿಬ್ಬಂದಿಯನ್ನು ಈ ವರ್ಷದ ಜೂನ್‌ನಲ್ಲಿ ಒಮನ್ ಕಡಲ ತೀರದಲ್ಲಿ ರಕ್ಷಿಸಲಾಗಿದೆ. ಇದನ್ನೂ ಓದಿ : – ಇನ್ಮುಂದೆ UPI ಫೋನ್ ಪೇ, ಗೂಗಲ್ ಪೇ, ಭೀಮ್ ವಹಿವಾಟು ದುಬಾರಿ..! ಶುಲ್ಕ ವಿಧಿಸಲು RBI ಚಿಂತನೆ
ಹಡಗು ತೇಲಿಕೊಂಡು ರಾಯಗಡ ಕಡಲ ತೀರಕ್ಕೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಂಕಿತ ದೋಣಿಯೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ರಾಯಗಢ ಜಿಲ್ಲೆ ಮತ್ತು ಸಮೀಪದ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : – 10 ಮಕ್ಕಳನ್ನು ಹೆತ್ತವರಿಗೆ ಭರ್ಜರಿ ಪುರಸ್ಕಾರ ..! ಇದು ಎಲ್ಲಿ ಗೊತ್ತಾ…?