ನಟಿ ಸಮಂತಾರಿಂದ ವಿಚ್ಛೇದನ ಪಡೆದ ಮೇಲೆ ನಾಗ ಚೈತನ್ಯ (Naga Chaitanya) ಶೋಭಿತಾ ಧುಲಿಪಲ ಜೊತೆ ಡೇಟ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನಾಗ ಚೈತನ್ಯ ಅಥವಾ ಶೋಭಿತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದು 1 ವರ್ಷ ಆಗುತ್ತಿದೆ. ಸದ್ಯ ಇಬ್ಬರೂ ತಮ್ಮದೇ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ನಡುವೆ ಶೋಭಿತಾ ಧುಲಿಪಾಲ ( Shobhita ) ಅವರೊಂದಿಗೆ ನಾಗ ಚೈತನ್ಯ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದ್ರೆ ನಾಗಚೈತನ್ಯ ಅಭಿಮಾನಿಗಳು ಸಮಂತಾ ಅವರೇ ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಇದನ್ನು ಓದಿ : – ‘ಬ್ರಹ್ಮಾಸ್ತ್ರ’ (Brahmastra) ಚಿತ್ರದ ಟ್ರೇಲರ್ ರಿಲೀಸ್ – ಅತಿಮಾನುಷ ವ್ಯಕ್ತಿಯಾಗಿ ರಣಬೀರ್ ಕಪೂರ್
ನಟಿ ಶೋಭಿತಾ ಧುಲಿಪಾಲ ಅವರೊಂದಿಗೆ ತಮ್ಮ ವಿಚ್ಛೇದಿತ ಪತಿ ನಾಗ ಚೈತನ್ಯ ಡೇಟಿಂಗ್ ಮಾಡುತ್ತಿರುವ ಕುರಿತು ಸಮಂತಾ ( samantha) ಮೌನ ಮುರಿದಿದ್ದಾರೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಸಮಂತಾ ಟೀಕಾಕಾರರಿಗೆ ಖಡಕ್ ಉತ್ತರ ನೀಡಿದ್ದಾರೆ. ‘ಹೆಣ್ಣು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಅದು ನಿಜ ಎನ್ನುತ್ತೀರಿ. ಗಂಡು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಇದು ಹೆಣ್ಣಿನ ಕೆಲಸ ಎನ್ನುತ್ತೀರಿ. ನೀವೂ ಇದನ್ನು ಬಿಟ್ಟು ಮುಂದೆ ಸಾಗಿ. ನಿಮ್ಮ ಕೆಲಸ ನೋಡಿಕೊಳ್ಳಿ, ನಿಮ್ಮ ಕುಟುಂಬದ ಕಡೆ ಗಮನ ನೀಡಿ’ ಎಂದು ಟೀಕಾಕಾರರಿಗೆ ಸಮಂತಾ ತಿರುಗೇಟು ನೀಡಿದ್ದಾರೆ.
ಇದನ್ನು ಓದಿ : – ಡ್ರಗ್ಸ್ ಕೇಸ್ – ಕಪೂರ್ ಗೆ ಸ್ಟೇಷನ್ ಬೇಲ್