ಮನ್ ಕಿ ಬಾತ್ ನಲ್ಲಿ ಕೋಲಾರದ ಅತಿದೊಡ್ಡ ರಾಷ್ಟ್ರಧ್ವಜ ಪ್ರಯತ್ನ ಶ್ಲಾಘಿಸಿದ ನರೇಂದ್ರ ಮೋದಿ

ಕೋಲಾರ ( kolara ) ನಗರದಲ್ಲಿ ಕಳೆದ ಆಗಸ್ಟ್ 15ರಂದು ಅತಿದೊಡ್ಡ ರಾಷ್ಟ್ರಧ್ವಜ ಅನಾವರಣಗೊಳಿಸಿದ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ( narendra modi ) ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶ್ಲಾಘಿಸಿದರು.

1.30 ಲಕ್ಷ ಚದರಡಿಯ ಬೃಹತ್ ತ್ರಿವರ್ಣ ಧ್ವಜ ತಯಾರಿಸಲಾಗಿತ್ತು. 204 ಅಡಿ ಉದ್ದ, 630 ಅಡಿ ಅಗಲದ ರಾಷ್ಟ್ರಧ್ವಜವನ್ನು ಕೋಲಾರ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಸಿದ್ಧಪಡಿಸಲಾಗಿತ್ತು. ಬೃಹತ್ ಧ್ವಜವು ಲಿಮ್ಕಾ ದಾಖಲೆಗೂ ಸೇರ್ಪಡೆಗೊಂಡಿತ್ತು. ಆಗಸ್ಟ್ 15ರಂದು ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೋಲಾರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೃಹತ್ ತ್ರಿವರ್ಣಧ್ವಜ ಅನಾವರಣಗೊಳಿಸಲಾಗಿತ್ತು. ಧ್ವಜಕ್ಕೆ ಸೇನಾ ಹೆಲಿಕಾಪ್ಟರ್ನಿಂದ ಪುಷ್ಪಾರ್ಚನೆ ಮಾಡಲಾಯಿತು. ಇದನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. ದೇಶದಲ್ಲೇ ಅತಿ ದೊಡ್ಡದಾದ ಬೃಹತ್ ತ್ರಿವರ್ಣ ಧ್ವಜವು ಲಿಮ್ಕಾ ದಾಖಲೆಗೂ ಸೇರ್ಪಡೆಯಾಯಿತು. ಇದನ್ನೂ ಓದಿ : –   ಹೆಚ್ಚಿನ ದರ ವಸೂಲಿ ಮಾಡಿದರೆ ಕಾನೂನು ಕ್ರಮ- ಖಾಸಗಿ ಬಸ್ ಮಾಲೀಕರಿಗೆ ಎಚ್ಚರಿಕೆ ಕೊಟ್ಟ ಶ್ರೀರಾಮುಲು

ಕೋಲಾರ ಸಂಸದ ಮುನಿಸ್ವಾಮಿ ( muniswamy ) ನೇತೃತ್ವದಲ್ಲಿ 13,000 ಮೀಟರ್ ಬಟ್ಟೆ ಬಳಸಿ 1.30 ಲಕ್ಷ ಚದರಡಿಯ ಬೃಹತ್ ಧ್ವಜ ನಿರ್ಮಿಸಲಾಯಿತು. ಈ ಧ್ವಜವು 204 ಅಡಿ ಉದ್ದ ಹಾಗೂ 630 ಅಡಿ ಅಗಲ ಇತ್ತು. 3300 ಕೆಜಿ ತೂಕವಿದ್ದ ಬೃಹತ್ ತ್ರಿವರ್ಣಧ್ವಜವನ್ನು ಸ್ವತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. 7 ಜನರ ತಂಡ ಸತತವಾಗಿ 8 ದಿನಗಳ ಕಾಲ ಹಗಲು ರಾತ್ರಿ ಶ್ರಮಿಸಿದರ ಫಲವಾಗಿ ಈ ಬೃಹತ್ ತ್ರಿವರ್ಣ ಧ್ವಜವನ್ನು ನಿರ್ಮಾಣ ಮಾಡಲು ಸಾಧ್ಯವಾಗಿತ್ತು ಎಂದು ಕೋಲಾರ ಸಂಸದ ಮುನಿಸ್ವಾಮಿ ಸಂತಸ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : –  ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ – ಆರೋಪಿ ರಚನಾ ಸಿಐಡಿ ಬಲೆಗೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!