ಉಕ್ರೇನ್ ನಲ್ಲಿ ಶೆಲ್ ದಾಳಿಗೆ ಬಲಿಯಾಗಿದ್ದ ನವೀನ್ ಮೃತದೇಹವನ್ನ ದಾವಣಗೆರೆಯ ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಲಾಗಿದೆ. ಪಾರ್ಥೀವ ಶರೀರದ ಮೆರವಣಿಗೆ ಮಾಡಿದ್ದ ವಾಹನದಿಂದ ಮೃತದೇಹವನ್ನು ಸರ್ಕಾರಿ ಆಂಬ್ಯುಲೆನ್ಸ್ಗೆ ಸ್ಥಳಾಂತರ ಮಾಡಲಾಗಿದೆ. ಪೊಲೀಸ್ ಭದ್ರತೆಯೊಂದಿಗೆ ದಾವಣಗೆರೆ ಮೆಡಿಕಲ್ ಕಾಲೇಜಿನತ್ತ ಹೊರಟ ನವೀನ್ ಪಾರ್ಥಿವ ಶರೀರಕ್ಕೆ ಹಾರ ಹಾಕಿ ಎಸ್ ಎಸ್ ಮೆಡಿಕಲ್ ಕಾಲೇಜ್ ಸಿಬ್ಬಂದಿ ಗೌರವಿಸಿದ್ದಾರೆ. ಈ ವೇಳೆ ಅಂತಿಮವಾಗಿ ಪುತ್ರನ ಪಾರ್ಥಿವ ಶರೀರಕ್ಕೆ ನಮಸ್ಕರಿಸಿ ನವೀನ್ ತಾಯಿ ವಿಜಯಲಕ್ಷ್ಮಿ ಕಣ್ಣೀರು ಹಾಕಿದ್ದಾರೆ. ನವೀನ್ ಪಾರ್ಥಿವ ಶರೀರದ ಜೊತೆಗೆ ನವೀನ್ ತಂದೆ ಶೇಖರ್ ಗೌಡ, ತಾಯಿ, ಸಹೋದರ ಕೂಡ ಆಸ್ಪತ್ರೆಗೆ ಆಗಮಿಸಿದ್ದಾರೆ. ಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಎಸ್ ಪ್ರಸಾದ ನೇತ್ರತ್ವದ ವೈದ್ಯರ ತಂಡ ಹಾಜರಾಗಿದೆ.
ಚಳಗೇರಿ ಪ್ರಮುಖ ರಸ್ತೆಗಳಲ್ಲಿ ನವೀನ್ ಮೃತದೇಹ ಮೆರವಣಿಗೆ
ಇದಕ್ಕೂ ಮೊದಲು ರಸ್ತೆ ಬದಿಗಳಲ್ಲಿ ನಿಂತು ಜನರು ನವೀನ್ ಅಂತಿಮ ದರ್ಶನ ಪಡೆದ್ರು. ಹೂ ಚೆಲ್ಲಿ ನಮನ ಸಲ್ಲಿಸಿದ್ರು.
0 116 Less than a minute