ಹೊಸ ವರ್ಷಾಚರಣೆ ಹಿನ್ನೆಲೆ – ಇಂದು ರಾತ್ರಿಯಿಂದಲೇ ಬೆಂಗಳೂರಿನ 30 ಫ್ಲೈ ಓವರ್ ಬಂದ್..!

ಹೊಸವರ್ಷದ ಸಂಭ್ರಮಕ್ಕೆ ಕೌಂಟ್ ಡೌನ್ ಶುರುವಾಗಿದೆ. 2023ರನ್ನ ಬರ ಮಾಡಿಕೊಳ್ಳೋಕೆ ಇಡೀ ಬೆಂಗಳೂರು ಸಜ್ಜಾಗಿದೆ.

ಹೊಸವರ್ಷ ( NEW YEAR ) ದ ಸಂಭ್ರಮಕ್ಕೆ ಕೌಂಟ್ ಡೌನ್ ಶುರುವಾಗಿದೆ. 2023ರನ್ನ ಬರ ಮಾಡಿಕೊಳ್ಳೋಕೆ ಇಡೀ ಬೆಂಗಳೂರು ಸಜ್ಜಾಗಿದೆ. ಇಂದು ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ಎರ್ಪೋರ್ಟ್ ಫ್ಲೈ ಓವರ್ ಬಿಟ್ಟು ಇನ್ನುಳಿದ 30 ಫ್ಲೈ ಓವರ್ ಬಂದ್ ಮಾಡಲಾಗುತ್ತಿದೆ.

New Year 2023: ಡಿ.31ರ ರಾತ್ರಿಯಿಂದಲೇ ಬೆಂಗಳೂರಿನ 30 ಫ್ಲೈ ಓವರ್ ಬಂದ್, 1 ಲಕ್ಷಕ್ಕೂ  ಅಧಿಕ ಸಿಸಿಟಿವಿಗಳ ಅಳವಡಿಕೆ - Bengaluru traffic restrictions bengaluru 30  flyovers closed from december 31st night ...

30 ಫ್ಲೈ ಓವರ್ ಮೇಲೆ ದ್ವಿಚಕ್ರ ಸೇರಿ ಎಲ್ಲ ವಾಹನ ಸಂಚಾರ ನಿಷೇಧಿಸಲಾಗುತ್ತಿದೆ. ಮಾರ್ಕೆಟ್ ಫ್ಲೈ ಓವರ್, ರಿಚ್ಮಂಡ್ ಸರ್ಕಲ್ ಫ್ಲೈ ಓವರ್, ಬೆನಗನಹಳ್ಳಿ ಫ್ಲೈ ಓವರ್, ಸಿಲ್ಕ್ ಬೊರ್ಡ್ ಫ್ಲೈ ಓವರ್, ಜಯದೇವ ಫ್ಲೈ ಓವರ್, ಆನಂದರಾವ್ ಸರ್ಕಲ್ ಫ್ಲೈ ಓವರ್, ತುಮಕೂರು ರೋಡ್ ಫ್ಲೈ ಓವರ್, ಡೈರಿ ಸರ್ಕಲ್ ಫ್ಲೈ ಓವರ್, ನಾಯಂಡಹಳ್ಳಿ ಫ್ಲೈ ಓವರ್, ನಾಗವಾರ ರಿಂಗ್ ರಸ್ತೆ ಫ್ಲೈ ಓವರ್ ಸೇರಿದಂತೆ 30 ಫ್ಲೈ ಓವರ್ ಮೇಲೆ ವಾಹನ ಸಂಚಾರ ನಿಷೇಧಿಸಲಾಗುತ್ತಿದೆ. ಇದನ್ನು ಓದಿ :- ರಾಮ-ಹನುಮಂತ ಬಿಜೆಪಿಯ ಹಕ್ಕುಸ್ವಾಮ್ಯವಲ್ಲ- ಕೇಸರಿಗೆ ತಲೆ ನೋವಾದ ಉಮಾಭಾರತಿ !

Pub And Restaurant Guidelines: ಹೊಸ ವರ್ಷದಂದು ಪಬ್-ರೆಸ್ಟೋರೆಂಟ್ ಮತ್ತು  ಪಿಜಿ​​ಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು - Pub and PG Guidelines Measures to be  taken at pub-restaurants on New Year's Day details in ...

ಬೆಂಗಳೂರು ನಗರದಾದ್ಯಂತ ಪೊಲೀಸರ ಹದ್ದಿನ ಕಣ್ಣು
ಹೊಸ ವರ್ಷದ ಸಂಭ್ರಮಾಚರಣೆಗೆ ಬೆಂಗಳೂರು ಮಹಾನಗರ ಸಿದ್ಧವಾಗುತ್ತಿದ್ದು ಬೆಂಗಳೂರು ನಗರದಾದ್ಯಂತ ಪೊಲೀಸರ ಹದ್ದಿನ ಕಣ್ಣೀಡಲಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ನಗರದಲ್ಲಿ 1 ಲಕ್ಷಕ್ಕೂ ಅಧಿಕ ಸಿಸಿಟಿವಿಗಳ ಅಳವಡಿಕೆ ಮಾಡಲಾಗುತ್ತಿದೆ. ಚರ್ಚ್ಸ್ಟ್ರೀಟ್, ಬ್ರಿಗೇಡ್ ರಸ್ತೆಯೊಂದರಲ್ಲೇ ಸಾವಿರಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ. ಸಿಸಿಟಿವಿ ಮಾನಿಟರಿಂಗ್ ರೂಮ್ ನಲ್ಲಿ ಕುಳಿತು ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ಅಹಿತಕರ ಘಟನೆಯಾದರೆ ಕೂಡಲೇ ಸ್ಥಳದಲ್ಲಿರುವ ಸಿಬ್ಬಂದಿಗೆ ಮಾಹಿತಿ ನೀಡುವಂತೆ ತಯಾರಿ ಮಾಡಿಕೊಳ್ಳಲಾಗಿದೆ.

Goraguntepalya flyover will be reopened for light vehicles in 2-3 days,  says CM - The Hindu

ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳ ಸುತ್ತಮುತ್ತ 37 ಸೇಫ್ ಹೌಸ್
ನ್ಯೂ ಇಯರ್ ಹಾಟ್ ಸ್ಪಾಟ್ ನಲ್ಲಿ ವುಮೆನ್ ಸೇಫ್ ಹೌಸ್ ರೆಡಿ ಮಾಡಲಾಗುತ್ತಿದೆ. ಮಹಿಳೆಯರು ಹಾಗೂ ತುರ್ತು ಆರೋಗ್ಯ ಸಮಸ್ಯೆಯಾದವರಿಗಾಗಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳ ಸುತ್ತಮುತ್ತ 37 ಸೇಫ್ ಹೌಸ್ ನಿರ್ಮಾಣಗೊಳ್ಳುತ್ತಿದೆ. ಪಾರ್ಟಿ ವೇಳೆ ಹೆಚ್ಚು ಪಾನಮತ್ತರಾಗಿ ನಿಯಂತ್ರಣ ಕಳೆದು ಕೊಂಡ ಮಹಿಳೆಯರಿಗಾಗಿ ಪ್ರತಿ ರಸ್ತೆಗೆ ಮೂರ್ನಾಲಕ್ಕರಂತೆ ಸೇಫ್ ಹೌಸ್ ನಿರ್ಮಿಸಲಾಗುತ್ತಿದೆ.

ಇದನ್ನು ಓದಿ :-  ಮೋದಿ ತಾಯಿ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!