ಎರಡನೇ ಮದುವೆ ತಯಾರಿ ಸುದ್ದಿ ಸುಳ್ಳು – ನಟಿ ಪ್ರೇಮಾ

ಉಡುಪಿಯ ಕಾಪುನಲ್ಲಿರುವ ಕೊರಗಜ್ಜ (Koragajja) ದೇವಸ್ಥಾನಕ್ಕೆ ನಟಿ ಪ್ರೇಮಾ ಭೇಟಿ ನೀಡಿ, ದೈವದ ದರ್ಶನ ಪಡೆದಿದ್ದು ದೊಡ್ಡ ಸುದ್ದಿಯಾಗಿತ್ತು.

ಉಡುಪಿಯ ಕಾಪುನಲ್ಲಿರುವ ಕೊರಗಜ್ಜ (Koragajja) ದೇವಸ್ಥಾನಕ್ಕೆ ನಟಿ ಪ್ರೇಮಾ ಭೇಟಿ ನೀಡಿ, ದೈವದ ದರ್ಶನ ಪಡೆದಿದ್ದು ದೊಡ್ಡ ಸುದ್ದಿಯಾಗಿತ್ತು. ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ಹಿನ್ನೆಲೆಯಲ್ಲಿ ನಟಿ ಪ್ರೇಮಾ (PREMA) ಅಲ್ಲಿಗೆ ಹೋಗಿದ್ದು ತಮ್ಮ ಎರಡನೇ ಮದುವೆ ವಿಚಾರವಾಗಿ ಎನ್ನುವ ಸುದ್ದಿ ಹರಡಿತ್ತು.

Swami koragajja tempal kapu - YouTube

ಪ್ರೇಮಾ ಸದ್ಯ ಎರಡನೇ ಮದುವೆ ತಯಾರಿಯಲ್ಲಿದ್ದಾರೆ ಎಂದೂ ಹೇಳಲಾಗಿತ್ತು. ಈ ಎಲ್ಲ ವಿಷಯಗಳ ಕುರಿತು ಸ್ವತಃ ಪ್ರೇಮಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಪ್ರೇಮಾ, ‘ಮದುವೆ ಬಗ್ಗೆ ಹಬ್ಬಿರುವ ಸುದ್ದಿ ಕೇವಲ ಗಾಸಿಪ್. ಎರಡನೇ ಮದುವೆ ವಿಚಾರ ಎಲ್ಲವೂ ಸುಳ್ಳು. ನಾನು ಹೊಸ ಹೊಸ ಕೆಲಸಗಳ ಬಗ್ಗೆ ಯೋಚನೆ ಮಾಡ್ತಿದ್ದಿನಿ. ಮದುವೆ ಸಮಯ ಬಂದಾಗ ಎಲ್ಲರಿಗೂ ತಿಳಿಸ್ತಿನಿ. ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ಕೊಟ್ಟಿದು ಮದುವೆ ವಿಚಾರವಾಗಿ ಅಲ್ಲ. ಸ್ನೇಹಿತೆಯ ಮದುವೆಗೆ ಹೋಗಿ ಅಲ್ಲಿಂದ ದೇವರ ದರ್ಶನ ಮಾಡಿ ಬಂದೆ. ಮದುವೆ ವಿಚಾರ ಸುಳ್ಳು’ ಎಂದು ಸ್ಪಷ್ಟನೆ ನೀಡಿದ್ದಾರೆ.

https://youtu.be/gG6E4RwKBs4

ಇದನ್ನು ಓದಿ :-  ಭ್ರಷ್ಟಾಚಾರದ ಬಗ್ಗೆ ಚರ್ಚಿಸಲು ವಿಧಾನಸೌಧದ ಮುಂದೆ ಒಂದು ವೇದಿಕೆ ಹಾಕಿ – ಬಿಜೆಪಿಗೆ ಹರಿಪ್ರಸಾದ್ ಪಂಥಾಹ್ವಾನ

 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!