ರಾಜ್ಯದಲ್ಲಿ ಕೊರೋನಾ ಏರಿಳಿಕೆ ಇದೆ. ಎಲ್ಲಾ ರೀತಿಯಲ್ಲೂ ಕಣ್ಗಾವಲು ಮಾಡಲಾಗ್ತಿದೆ . ಇವತ್ತು ಕೂಡ ಖಾಸಗಿ ಆಸ್ಫತ್ರೆ ಅವರ ಜೊತೆ ಸಭೆ ನಡೆಸಲಾಗುವುದು.
ಜೂನ್‌ನಲ್ಲಿ ಕೇಸ್ ಏರಿಕೆ ಆಗುತ್ತಾ ಎಂಬ ವಿಚಾರ ಈಗಲೇ ಏನು ಭವಿಷ್ಯ ನುಡಿಯೋದು ಬೇಡ ಎಂದು ಆರೋಗ್ಯ ಸಚಿವ ಸುಧಾಕರ್ (SUDHAKAR )ತಿಳಿಸಿದ್ದಾರೆ. ನಮ್ಮ ಕಣ್ಮುಂದೆ ಕಾನ್ಫುರ ಐಐಟಿ ತಜ್ಞರ ವರದಿ ಇದೆ ನೋಡೋಣ ಎಂದು ಹೇಳಿದ್ದಾರೆ. ಇದೇ ವೇಳೆ ಟೊಮ್ಯಾಟೊ ಪ್ಲೂ ಗು ಕೊವಿಡ್ ಗೂ ಸಂಬಂಧ ಇಲ್ಲ. ಇದು ಹೊಸದಾಗಿ ಕಂಡು ಬಂದಿರುವಂತಹದಲ್ಲ. ಈ ಹಿಂದೆ ಇದ್ದಂತಹ ವೈರಲ್ ಆಗಿದ್ದು ಇದಕ್ಕೆ ಆತಂಕ ಪಡಬೇಕಾಗಿಲ್ಲ . ಇದನ್ನೂ ಓದಿ : – ಆಸಾನಿಚಂಡಮಾರುತದ ಎಫೆಕ್ಟ್ – ಬೆಂಗಳೂರಿನಲ್ಲಿ ಇಂದು ಕೂಡ ಮೋಡ ಕವಿದ ವಾತಾವರಣ
ಐದು ವರ್ಷದ ಒಳಗಿನ ಮಕ್ಕಳಿಗೆ ಕಾಣಿಸಿಕೊಳ್ಳುತ್ತಾ ಇದೆ ಹೀಗಾಗಿ ಕೇರಳದ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಡಿಹೆಚ್ಓ ಗಳಿಗೆ ಸೂಚನೆ ನೀಡಿದ್ದೇನೆ. ಕೇರಳ ದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲು ಸೂಚನೆ ನೀಡಿದ್ದೇನೆ. ಆ ರೀತಿ ರೋಗ ಲಕ್ಷಣ ಕಂಡು ಬಂದರೆ ಟೆಸ್ಟ್ ಮಾಡೋದಕ್ಕೂ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : – ನಾನು ಯಾವುದೇ ಹೆಸರುಗಳನ್ನು ಅಮಿತ್ ಶಾ ಅವರಿಗೆ ಹೇಳಿಲ್ಲ – ಸಿಎಂ ಬೊಮ್ಮಾಯಿ