ಟಿವಿಯಲ್ಲಿ ನೇರ ಪ್ರಸಾರ ಆಗುತ್ತಿದ್ದಾಗಲೇ ರಷ್ಯಾ ಟಿವಿ ಚಾನೆಲ್ ನ ಎಲ್ಲಾ ಸಿಬ್ಬಂದಿ ರಾಜೀನಾಮೆ ಪತ್ರ ನೀಡಿ ಹೊರಗೆ ಹೋಗಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದೆ.
ಟಿವಿ ರೈನ್ ಸಂಸ್ಥೆಯ ಸುದ್ದಿ ಪ್ರಸಾರದ ವೇಳೆ ಸಿಬ್ಬಂದಿ ನೋ ವಾರ್ ಎಂದು ಘೋಷಣೆ ಕೂಗುತ್ತಾ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿ ಹೊರನಡೆದಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯ ವರದಿಯನ್ನು ಪ್ರಸಾರ ಮಾಡದೇ ಇರಲು ಸಂಸ್ಥೆ ನಿರ್ಧರಿಸಿದ ಬೆನ್ನಲ್ಲೇ ಚಾನೆಲ್ ನ ಎಲ್ಲಾ ಸಿಬ್ಬಂದಿ ರಾಜೀನಾಮೆ ನೀಡಿ ಹೊರಗೆ ಹೋಗಲು ನಿರ್ಧರಿಸಿದ್ದಾರೆ.