ಇವತ್ತಿನ ನಾಗರೀಕ ಸಮಾಜದಲ್ಲಿ ಸೌಂಡ್ ಪೊಲ್ಯೂಷನ್ ಮಾರಕವಾಗಿದೆ ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಸರ್ಕಾರ, ಪೊಲ್ಯೂಷನ್ ಕಂಟ್ರೋಲ್ ಬೋರ್ಡ್, ಸುಪ್ರೀಂ ಕೋರ್ಟ್ , ಹೈಕೋರ್ಟ್ ನಿರ್ದಿಷ್ಟವಾದ ಗೈಡ್ ಲೈನ್ಸ್ ಮಾಡಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ರ ವರೆಗೆ ಆಂಪ್ಲಿಫೈಡ್ ಬಳಸಿ ಸೌಂಡ್ ಮಾಡಬಾರದು ಅಂತಾ ಜಡ್ಜ್ ಮೆಂಟ್ ಬಂದಿದೆ.
ಅನೇಕ ಮಸೀದಿಗಳು 8 ದಿಕ್ಕುಗಳಲ್ಲದ ಮೈಕ್ ಇಟ್ಟು ಅಜಾನ್ ಮಾಡ್ತಿದ್ದಾರೆ. ಬೆಳಗ್ಗೆ 5 ಗಂಟೆಗೆ ಅಜಾನ್ ಕೂಗ್ತಿದ್ದಾರೆ. ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗೈಡ್ ಲೈನ್ಸ್ ಜಾರಿ ಮಾಡುವಂತೆ ಕಮಿಷನರ್ ಗೆ ದೂರು ನೀಡಿದ್ದೀವಿ. ಬೆಳಗ್ಗೆ 5 ಗಂಟೆಗೆ ಕೂಗುವ ಆಜಾನ್ ವಿಚಾರವಾಗಿ ಆಯಾ ವಿಭಾಗದ ಎಸಿಪಿಗಳಿಗೆ ಸೂಚನೆ ನೀಡಲಾಗುತ್ತೆ. ನಿರ್ದಿಷ್ಟ ಕ್ರಮ ಕೈಗೊಳ್ಳುವ ಬಗ್ಗೆ ಕಮಿಷನರ್ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ರು.