ಸಿಲಿಕಾನ್ ಸಿಟಿಯ ಪ್ರಸಿದ್ಧ ವೇಣುಗೋಪಾಲ ಸ್ವಾಮೀ ದೇವಸ್ಥಾನಕ್ಕೆ ನೊಟೀಸ್ ಜಾರಿಗೊಳಿಸಲಾಗಿದೆ. ಮಲ್ಲೇಶ್ವರಂ 11 ನೇ ಕ್ರಾಸ್ ನಲ್ಲಿ ಇರೋ ವೇಣುಗೋಪಾಲ್ ಸ್ವಾಮಿ ದೇವಸ್ಥಾನದ ಪೂಜಾ ಸಮಯದಲ್ಲಿ ಜೋರಾಗಿ ಶಬ್ದ ಮಾಡ್ತಾರೆ ಅಂತಾ ಸಾರ್ವಜನಿಕರು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದಾರೆ.
ಮೌಖಿಕ ದೂರಿನ ಆಧಾರದ ಮೇಲೆ ಪೊಲೀಸರು ದೇವಸ್ಥಾನಕ್ಕೆ ನೋಟಿಸ್ ನೀಡಿದ್ದಾರೆ. ಜೋರು ಶಬ್ದದಿಂದ ಅಕ್ಕಪಕ್ಕದ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿತೆ ತೊಂದರೆ ಆಗ್ತಿದೆ. ಇದನ್ನು ಓದಿ :– ಅನುಭವಿ ಆರ್ ಅಶೋಕ್ ಗೆ ಒಲಿಯತ್ತಾ ಗೃಹ ಖಾತೆ ?
ಶಬ್ದ ವಾಹಕದ ಮೂಲಕ ಶಬ್ಧ ಜೋರು ಮಾಡ್ತಾರೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನವಸತಿ ಪ್ರದೇಶದಲ್ಲಿ ರೂಲ್ಸ್ ಫಾಲೋ ಮಾಡುವಂತೆ ಮಲ್ಲೇಶ್ವರಂ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.
ಇದನ್ನು ಓದಿ :– ಇಂದಿನಿಂದ ಪಿಯುಸಿ ಪರೀಕ್ಷೆ ಆರಂಭ – ಸಕಲ ಸಿದ್ದತೆ ಮಾಡಿಕೊಂಡ ಶಿಕ್ಷಣ ಇಲಾಖೆ