ಬೆಂಗಳೂರಿ (Bengaluru) ನಲ್ಲಿ ಕೋವಿಡ್ (Covid) ಬಗ್ಗೆ ಬಹಳ ದಿನಗಳಿಂದ ರಿವ್ಯೂ ಮಾಡಲಾಗಿದೆ ಎಂದು ಸಚಿವ ಸುಧಾಕರ್ (Sudhakar) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಕಳೆದ ಒಂದೆರಡು ತಿಂಗಳಿನಿಂದ ಪಾಸಿಟಿವ್ ರೆಟ್ ಹೆಚ್ಚಾಗುತ್ತಿದೆ. ದೆಹಲಿಯಲ್ಲಿ 15 ರಷ್ಟು ಹೆಚ್ಚಾಗಿದೆ.
ನಮ್ಮಲ್ಲಿ 7% ರಷ್ಟು ಹೆಚ್ಚಾಗಿದೆ, ಕೋವಿಡ್ ಅತೀ ಹೆಚ್ಚು ಧಾರವಾಡದಲ್ಲಿ ಇದೆ. ಯಾರಿಗೆ ರೋಗದ ಲಕ್ಷಣಗಳಿವೆ ಅವರಿಗೆ ನಾವು ಟೆಸ್ಟ್ ಮಾಡುತ್ತಿದ್ದೇವೆ. ಪ್ರಾಥಮಿಕ ಸಂಪರ್ಕ ಇದ್ದವರಲ್ಲಿ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಅವರಿಗೂ ಟೆಸ್ಟ್ ಮಾಡಲಾಗುತ್ತಿದೆ. ಪಾಸಿಟಿವ್ ರೆಟ್ 3 ನೇ ಡೋಸ್ ತೆಗೆದುಕೊಂಡವರಲ್ಲಿ ಕಡಿಮೆಯಾಗಿದೆ ಎಂದು ಹೇಳಿದರು. ಇದೇ ವೇಳೆ ಮೋದಿ (Modi) ಯವ್ರು ಎಲ್ಲರನ್ನೂ ಕಾಪಾಡಬೇಕು ಅಂತ 3 ನೇ ಡೋಸ್ ನ್ನ ಉಚಿತವಾಗಿ ಕೊಡುತ್ತಿದ್ದಾರೆ. ಲಕ್ಷಾಂತರ ಡೋಸ್ ಗಳು ನಮ್ಮಲ್ಲಿ ಇದ್ರು ಕೂಡ ಜನ ಬರದೇ ಇರುವುದು ಸರಿಯಲ್ಲ. 1 ವರ್ಷ ಆದ ಮೇಲೆ 3 ನೇ ಡೋಸ್ ತೆಗೆದುಕೊಳ್ಳಬೇಕು. 3 ಡೋಸ್ ತೆಗೆದುಕೊಂಡವರಿಗೆ ಯಾವುದೇ ರೀತಿಯ ಸಾವು ನೋವು ಆಗುವುದಿಲ್ಲ. 3 ನೇ ಡೋಸ್ ನ್ನು ಜನರು ಪಡೆಯಬೇಕು.
60 ವರ್ಷ ಮೇಲ್ಪಟ್ಟವರು ಆದಷ್ಟು ಬೇಗ 3 ನೇ ಡೋಸ್ ಪಡೆಯಬೇಕು. ಮಾಸ್ಕ್ ಕಡ್ಡಾಯ ಮಾಡಿಕೊಳ್ಳಿ, ಕೋವಿಡ್ ಅಂದರೆ ಭಯ ಹೋಗಿದೆ. ಶೀತ ಕೆಮ್ಮು, ಮೈ ಕೈ ನೋವು ಇರುತ್ತೇ .ಒಂದು ವಾರದ ನಂತ್ರ ಹೋಗುತ್ತೆ ಅಂತ ಅಸಡ್ಡೆ ಇದೆ. ಲಸಿಕೆ ಲಭ್ಯ ಇದ್ರೂ ತೆಗೆದುಕೊಳ್ಳದೇ ಇರುವುದು ಮಹಾ ಅಪರಾಧವಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ 60 ವರ್ಷ ಮೇಲ್ಪಟ್ಟವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿ. ಯಾವುದೇ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗೆ ಚಿಕಿತ್ಸೆ ಇಲ್ಲ ಅಂತ ಕಳುಹಿಸುವಂತಿಲ್ಲ. ಇವತ್ತು ಸರ್ಕಾರದಿಂದಲೂ ಆದೇಶ ನೀಡಲಾಗುವುದು. ಈ ಬಗ್ಗೆ ನನಗೆ ದೂರುಗಳು ಬಂದಿವೆ, ಹಾಗಾಗಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ . ಚಿಕಿತ್ಸೆ ಪಡೆಯದೇ ಇದ್ರೆ ಕೆಪಿಎಂಇ ಆ್ಯಪ್ ಅಡಿಯಲ್ಲಿ ಕ್ರಮವಾಗುತ್ತದೆ. ಸದ್ಯಕ್ಕೆ ದಂಡ ಹಾಕುವ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ. ಆದ್ರೆ ಎಲ್ಲಾರೂ ಮಾಸ್ಕ್ ಹಾಕಬೇಕು. ಇದನ್ನೂ ಓದಿ : – ಚಾಮರಾಜಪೇಟೆ ಮೈದಾನದಲ್ಲಿ ಕಂದಾಯ ಇಲಾಖೆಯಿಂದಲೇ ಧ್ವಜಾರೋಹಣ – ಆರ್ ಅಶೋಕ್
15 ದಿನಗಳ ನಂತ್ರ ಮತ್ತೆ ಸಭೆ ಕರೆಯಲಾಗುವುದು ಆರ್ಥಿಕ, ಸಾಮಾಜಿಕ ಚಟುವಟಿಕೆಗಳನ್ನು ನಿಯಂತ್ರಣ ಮಾಡುವ ಪ್ರಶ್ನೆ ಸರ್ಕಾರದ ಮುಂದೆ ಇಲ್ಲ. ಯಾವುದೇ ಚಟುವಟಿಕೆ ತೆಗೆದುಕೊಳ್ಳುವಾಗ ಜನರೇ ಜವಾಬ್ದಾರಿ ತೆಗೆದುಕೊಂಡ್ರೆ ಕೋವಿಡ್ ನಿಯಂತ್ರಣಕ್ಕೆ ಬರುತ್ತೆ ಅಂತ ಹೇಳಿದ್ದಾರೆ. ತಕ್ಷಣ ಯಾವುದೇ ನಿಯಂತ್ರಣ ತೆಗೆದುಕೊಳ್ಳುವ ಪ್ರಸ್ತಾವ ಇಲ್ಲ ಎಂದು ಸುಧಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ : – ಸಿದ್ದರಾಮಯ್ಯ ಅವರಿಂದ ಪಾಠ ಕಲಿಯುವ ಅಗತ್ಯ ನಮ್ಮ ಪಕ್ಷಕ್ಕಿಲ್ಲ – ಎ.ನಾರಾಯಣ ಸ್ವಾಮಿ