ನಿರ್ಮಲಾನಂದ ಶ್ರೀ (Niramalananda sri) ಗಳಿಗೆ ಸಚಿವರು ಅಪಮಾನ ಮಾಡಿದ್ರ ಎಂಬ ಪ್ರಶ್ನೆ ಎದುರಾಗಿದೆ. ಸಚಿವ ಆರ್.ಅಶೋಕ್ (R.Ashok) ರಿಂದ ಒಕ್ಕಲಿಗ ಸ್ವಾಮೀಜಿಗೆ ಅಪಮಾನ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಒಕ್ಕಲಿಗ ಸಮುದಾಯ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ.
ನಿರ್ಮಲಾನಂದ ಶ್ರೀಗಳ ಹೆಗಲ ಮೇಲೆ ಅಶೋಕ್ ಕೈ ಹಾಕಿದ್ದಾರೆ. ಸ್ವಾಮೀಜಿಗಳು ಅಂದ್ರೆ ಗೌರವ, ಸಚಿವರಿಗೆ ಭಯಭಕ್ತಿ ಇಲ್ವಾ. ಕಂದಾಯ ಸಚಿವರಿಗೆ ಶ್ರೀಗಳು ಅಂದ್ರೆ ಹುಡುಗಾಟಿಕೆನಾ. ಹುಡುಗಾಟಿಕೆ ಮಾಡಲು ಹೋಗಿ ಸಚಿವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಟಿ ಕೋಟಿ ಖರ್ಚು ಮಾಡಿ ಒಕ್ಕಲಿಗ ಮತ ಸೆಳೆಯಲು ಮಾಡಿದ ಪ್ರಯತ್ನವೆಲ್ಲಾ ವ್ಯರ್ಥವಾಯಿತಾ ಎಂದು ಒಕ್ಕಲಿಗ ಸಮಾಜದವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : – ಬೆಂಗಳೂರಿನ ನಾಗರಿಕರೇ ಈ ಬಾರಿ ಆನ್ ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿಸಬೇಡಿ