ಇವತ್ತು ರಾಜ್ಯದಲ್ಲಿ ಯುವಕರ ಭವಿಷ್ಯಕ್ಕೆ ಉದ್ಯೋಗ ರೂಪಿಸುವಲ್ಲಿ ಸರ್ಕಾರ ಭ್ರಷ್ಟಾಚಾರ ಎಸಗಿದೆ. ಎಲ್ಲಾ ನೇಮಕಾತಿಯಲ್ಲಿ ಹಗರಣಗಳ ಸುರಿಮಳೆಯಾಗಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯದ 30- 40 ವರ್ಷಗಳಿಂದ ಡಿಸ್ಟ್ರಿಕ್ಟ್ ಲೆವೆಲ್, ಕಮಿಟಿ, ಸ್ಟೇಟ್ ಲೆವೆಲ್ ಕಮಿಟಿ ರದ್ಧಾಗಿದೆ. ನಿನ್ನೆ ಸಿಎಂ ಮತ್ತು ಹೋಮ್ ಮಿನಿಸ್ಟರ್ ಅವರ ಅಭಿಪ್ರಾಯ ಹೇಳಿದ್ದಾರೆ. ನಿನ್ನೆಯಷ್ಟೇ ದಿವ್ಯಾ ಅವರನ್ನ ಬಂಧಿಸಿದ್ದಾರೆ. ಬಿಜೆಪಿಯವರು ಅವರವರ ದೃಷ್ಟಿಕೋನದಂತೆ ಕಾಂಗ್ರೆಸ್ ನವರೂ ಭಾಗಿದಾರರು ಅಂತಾ ತೋರಿಸೋಕೆ ಮುಂದಾಗಿದ್ರು ಎಂದು ತಿಳಿಸಿದ್ರು. ಇದನ್ನೂ ಓದಿ :- ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ – ನಾಳೆಯೊಳಗೆ ಆರೋಪಿಯನ್ನ ಬಂದಿಸುತ್ತೇವೆ – ಡಾ. ಕೆ ಸುಧಾಕರ್
ಹೇಗೆ ಪರೀಕ್ಷೆ ರದ್ದು ಮಾಡಲು ಸಾಧ್ಯ?
ಯಾವ ಆಧಾರದಡಿ ನೀವು ನೇಮಕಾತಿ ರದ್ದು ಮಾಡಿದ್ದೀರಿ? ಎಂದು ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗೆ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ಇವತ್ತು ಬೇರೆ ಬೇರೆ ಇಲಾಖೆಗಳಲ್ಲೂ ಅಕ್ರಮ ನಡಿಯುತ್ತಿದೆ. ಈ ಬಗ್ಗೆ ಯಾಕೆ ಸಚಿವರು ಮೌನ ವಹಿಸಿದ್ದಾರೆ?
ನಾವು ಯಾರನ್ನೂ ರಾಜೀನಾಮೆ ಕೇಳೋದಿಲ್ಲ,ಅವರು ಕೊಡೋದೂ ಇಲ್ಲ. ಮುಖ್ಯಮಂತ್ರಿ ಕೂಡ ಈ ಜವಾಬ್ದಾರಿ ಹೊರಬೇಕು. ಅಕ್ರಮದಲ್ಲಿ ಭಾಗಿಯಾಗಿರೋ ನಿಮ್ಮ ಪಕ್ಷದ ಕಾರ್ಯಕರ್ತರ ಹೆಸರನ್ನು ನಾವು ಹೇಳೋದಕ್ಕೂ ಮುಂಚೆ ನೀವೆ ಬಹಿರಂಗಗೊಳಿಸಿ ಎಂದು ಹೇಳಿದ್ರು.
ಇದನ್ನೂ ಓದಿ :- ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ – ತನ್ನ ಬಳಿಯಿದ್ದ ಮೊಬೈಲ್ ಒಡೆದು ಹಾಕಿದ ದಿವ್ಯಾ ಹಾಗರಗಿ