ಹೊಸಕೋಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ – ಕೋಟ್ಯಾಂತರ ಮೌಲ್ಯದ ರಕ್ತಚಂದನ ಪೊಲೀಸರ ವಶಕ್ಕೆ

ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆ ಹೊಸಕೋಟೆ (Hoskote) ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ಹೊರವಲಯದಲ್ಲಿ 650 ಕ್ಕೂ ಅಧಿಕ ತುಂಡು, ಕೋಟ್ಯಂತರ ರೂಪಾಯಿ ಮೌಲ್ಯದ ರಕ್ತಚಂದನವನ್ನು (Red sandalwood) , ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನೀಲಗಿರಿ ಮರಗಳ (Nilgiri tress) ನಡುವೆ ರಕ್ತಚಂದನ ಬಚ್ಚಿಟ್ಟು ಖದೀಮರು ಸ್ಮಗ್ಲಿಂಗ್ ಮಾಡಲು ಯತ್ನಿಸಿದ್ದಾರೆ.  ಹೊಸಕೋಟೆ  ಡಿವೈಎಸ್ಪಿ  ಉಮಾಶಂಕರ್ (Umashankar) ನೇತೃತ್ವದಲ್ಲಿ ಮಧ್ಯರಾತ್ರಿವರೆಗೂ ಕಾರ್ಯಾಚರಣೆ  ನಡೆಸಿದ್ದಾರೆ. ಕೆಜಿಗಟ್ಟಲೆ  ರಕ್ತಚಂದನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೆರೆಯ ಆಂಧ್ರದ ನಲ್ಲಮಲ್ಲ ಅರಣ್ಯ ಪ್ರದೇಶದಿಂದ ರಕ್ತ ಚಂದನ ತಂದಿದ್ದು , ಪೊಲೀಸರು ದಾಳಿ ನಡೆಸುತ್ತಿದ್ದಂತೆ ಖದೀಮರು ಎಸ್ಕೆಪ್ ಆಗಿದ್ದಾರೆ.

ರಕ್ತಚಂದನ ಬಚ್ಚಿಟ್ಟಿದ್ದ ಆರೋಪಿಗಳಾದ ಅಯಾಜ್ ಖಾನ್ , ಜಮೀರ್ ಮತ್ತು ಇರ್ಪಾನ್ ಎಸ್ಕೆಪ್ ಆಗಿದ್ದು , ಮೂವರ ವಿರುದ್ಧ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ . ಹೊಸಕೋಟೆಯ ಪೊಲೀಸರಿಂದ ಆರೋಪಿಗಳ ಬಂಧನಕ್ಕೆ ಶೋಧಕಾರ್ಯ ನಡೆದಿದೆ . ಇದನ್ನೂ ಓದಿ : –  ರೈತರನ್ನು ಬಲಿಪಡೆದಾಯಿತು.. ಈಗ ಸೈನಿಕರ ಸರದಿಯೇ? ಅಗ್ನಿಪಥ್ ಯೋಜನೆ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!