ರಾಜ್ಯದಲ್ಲಿ ಕಾಂಗ್ರೆಸ್ (Congress) ನಾಯಕರಿಗೆ ಗೊಂದಲ ಸೃಷ್ಟಿ ಮಾಡುವುದು ವಾಡಿಕೆಯಾಗಿದೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ (A.Narayanaswamy) ಹೇಳಿದ್ದಾರೆ.
ಚಿತ್ರದುರ್ಗ (Chitradurga) ದಲ್ಲಿ ಮಾತನಾಡಿದ ಅವರು ಆಡಳಿತ ಯಂತ್ರ ಸರಿ ದಿಕ್ಕಿನಲ್ಲಿ ಹೋಗುವಾಗ ಕುತಂತ್ರ ಮಾಡುತ್ತಾರೆ. ಬಿಜೆಪಿ ಪಕ್ಷ ಹಾಗೂ ಯಡಿಯೂರಪ್ಪ (Yediyurappa) ಸಂಕಲ್ಪದಂತೆ ಬೊಮ್ಮಾಯಿ (Bommai) ಸಿಎಂ ಆಗಿದ್ದಾರೆ. ಯಡಿಯೂರಪ್ಪ ಮಾರ್ಗದರ್ಶನ, ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎಂದು ಹೇಳಿದರು. ದಲಿತ ಸಿಎಂ ವಿಚಾರಕ್ಕೆ ನಾರಾಯಣ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಖಂಡಿತವಾಗಿ ಎಲ್ಲಾ ವರ್ಗಕ್ಕೆ ಅವಕಾಶ ನೀಡಬೇಕು. ಬಿಜೆಪಿ (BJP) ಪಕ್ಷ ಅವಕಾಶ ಬಂದಾಗ ಎಲ್ಲಾ ವರ್ಗಗಳಿಗೂ ಅವಕಾಶ ನೀಡುತ್ತದೆ. ಅಮೃತ ಮಹೋತ್ಸವ (Amritha mahotsava) ದೇಶದ ಒಗಟ್ಟಿನ ಕುರಿತು ತಿಳಿಸಿದೆ. ಇದನ್ನೂ ಓದಿ : – ಲೋಕಾಯುಕ್ತ ವ್ಯಾಪ್ತಿಗೆ ಎಸಿಬಿ – ಹೈಕೋರ್ಟ್ ತೀರ್ಮಾನ ಗೌರವಿಸಬೇಕು ಎಂದ ಸಿದ್ದರಾಮಯ್ಯ
ಸಿದ್ದರಾಮಯ್ಯ (Siddaramaiah) ನವರು ತಿರಂಗ ಯಾತ್ರೆ ಕುರಿತು ರಾಜಕೀಯ ಮಾಡುತ್ತಿದ್ದಾರೆ. ಭಾರತೀಯರ ದೇಶ ಪ್ರೇಮದ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಇದು ಶೋಭೆ ತರಲ್ಲ. ಸಿದ್ದರಾಮಯ್ಯ ಎಂಥ ದೇಶ ಭಕ್ತ ಎಂಬುದಕ್ಕೆ ತ್ರಿವರ್ಣ ದ್ವಜದ ಬಣ್ಣ ಹೇಳುವಾಗ ಕೆಂಪು ಎಂದಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರ ಅಜ್ಞಾನ ಪ್ರದರ್ಶನ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಂದ ಪಾಠ ಕಲಿಯುವ ಅಗತ್ಯ ನಮ್ಮ ಪಕ್ಷಕ್ಕಿಲ್ಲ. ವಿಶ್ವದಲ್ಲೇ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನ ರಾಮ ಮಂದಿರ ಕಟ್ಟುವ ಮೂಲಕ ನೀಡಿದ್ದೇವೆ ಎಂದು ಎ.ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ : – ಚಾಮರಾಜಪೇಟೆ ಮೈದಾನದಲ್ಲಿ ಕಂದಾಯ ಇಲಾಖೆಯಿಂದಲೇ ಧ್ವಜಾರೋಹಣ – ಆರ್ ಅಶೋಕ್