ಸಿಎಂ ಬೊಮ್ಮಾಯಿಯನ್ನು ಕೆಳಗಿಳಿಸುವ ತಾಕತ್ತು ನನಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ. ಇಂಚಗೇರಿಯಲ್ಲಿ ನಡೆದ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಹಕ್ಕು ಒತ್ತಾಯ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಸಿಎಂ ಅವರು ಕೊಡಲೇ ಬೇಕು.
ಇಲ್ಲವಾದಲ್ಲಿ ಮುಖ್ಯಮಂತ್ರಿಯನ್ನೇ ಕೆಳಗಿಳಿಸುವಷ್ಟು ತಾಕತ್ತು ನನಗಿದೆ. ನಮ್ಮ ಸಮಾಜದ ವಿರುದ್ಧ ಉಲ್ಟಾಹೊಡೆದರೆ ಮುಗೀತು. ಈ ಬಗ್ಗೆ ಬೊಮ್ಮಾಯಿಗೆ ಅಂಜಿಕೆ ಇದೆ. ಈ ಮನುಷ್ಯನನ್ನು ಸುಮ್ಮನೆ ಕೂರಿಸಿದರೆ ಆರಾಮಾಗಿ ಇನ್ನೊಂದು ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಅಂತಾರೆ. ಅದಕ್ಕೆ ಬೊಮ್ಮಾಯಿ ಪಾಪ ಎಲ್ಲಾ ಶಾಸಕರಿಗಿಂತ ನನಗೆ ಎರಡು ಮೂರು ಕೋಟಿ ಅನುದಾನ ಹೆಚ್ಚಿಗೆ ಕೊಡುತ್ತಾರೆ ಎಂದು ಹೇಳಿದ್ದಾರೆ. ಇದನ್ನು ಓದಿ : – ಬಿಜೆಪಿ ನಾಯಕರಿಗೆ ನಿಜವಾಗಿಯೂ ಹುಚ್ಚು ಹಿಡಿದಿದೆ – ಬಿ.ವಿ.ಶ್ರೀನಿವಾಸ್
ಹರಿಹರ ಪೀಠದ ವಚನಾನಂದ ಶ್ರೀಗಳಿಗೆ ಬಿಜೆಪಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹುಚ್ಚು ಸ್ವಾಮೀಜಿ ಎಂದು ಟೀಕಿಸಿದ್ದಾರೆ. ಹುಚ್ಚು ಸ್ವಾಮಿ ಬೆನ್ನು ಹತ್ತಿದರೆ ಶಿಗ್ಗಾಂವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಉಲ್ಟಾ ಹೊಡೀತಾರೆ. ಪಂಚಮಶಾಲಿ ಸಮಾಜಕ್ಕೆ ಬಂದರೇ ಯಾವುದೇ ಹೊಂದಾಣಿಕೆ ಇಲ್ಲ. ಬೊಮ್ಮಾಯಿ ಸಾಹೇಬರೇ ನನ್ನನ್ನು ಸಚಿವ ಮಾಡುತ್ತೀರೋ, ಬಿಡುತ್ತೀರೋ ನಮಗೆ ಬೇಕಾಗಿಲ್ಲ. ಇದೇನು ಖುಲ್ಲಂಖುಲ್ಲಾ ಮಾಡಿ ಬಿಡಿ ಅಂತ ಸಿಎಂ ಮುಂದೆ ಹೇಳಿದ್ದೀನಿ ಎಂದು ತಿಳಿಸಿದ್ದಾರೆ.
ಇದನ್ನು ಓದಿ : – ಭಾರತ ದೇಶ ಹಿಂದೂ ರಾಷ್ಟ್ರ ಆಗಬೇಕು – ಪ್ರಮೋದ್ ಮುತಾಲಿಕ್