ಸ್ಮಶಾನ ಕ್ಕೆ ಹೋಗಲು ದಾರಿ ಇಲ್ಲ ಎಂದು ಆರೋಪಿಸಿ ಡಿಸಿ ಕಚೇರಿ ಎದುರು ಶವವಿಟ್ಟು, ಏಣಗಿ ಗ್ರಾಮಸ್ಥರು ಪ್ರತಿಭಟನೆ ಮಾಡಿರುವ ಘಟನೆ ಬೆಳಗಾವಿ( belagavi) ಯಲ್ಲಿ ನಡೆದಿದೆ. ಅಬ್ದುಲ್ ಮಿಶ್ರಿಕೋಟಿ(65) ಎಂಬುವವರು ಮೃತಪಟ್ಟಿದ್ದರು.
ಸ್ಮಶಾನಕ್ಕೆ ಹೋಗುವುದಕ್ಕೆ ದಾರಿ ಇಲ್ಲ ಎಂದು ಜನರು ಗರಂ ಆಗಿದ್ದು, ಸ್ಮಶಾನಕ್ಕೆ ಜಾಗ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಬೇಕೆ ಬೇಕು ನ್ಯಾಯ ಬೇಕು ಅಂತಾ ಘೋಷಣೆ ಕೂಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು. ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಆಗಮಿಸಿ, ಗ್ರಾಮಸ್ಥರ ಜತೆಗೆ ಚರ್ಚೆ ಮಾಡಿ ಮನವೊಲಿಸಲು ಯತ್ನಿಸಿದರು. ಸ್ಮಶಾನಕ್ಕೆ ಹೋಗುವ ದಾರಿ ಮಂಜೂರು ಮಾಡುವವರೆಗೂ ಹೋಗಲ್ಲ ಅಂತಾ ಗ್ರಾಮಸ್ಥರು ಪಟ್ಟು ಹಿಡಿದರು. ಈ ವೇಳೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಜಾಗ ಕೊಡಿಸುವುದಾಗಿ ಎಡಿಸಿ ಹೇಳಿದ್ರೂ, ಅಧಿಕೃತ ಆದೇಶ ಮಾಡಿ ಅಂತಾ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ : – ಇಂದಿನಿಂದ SSLC ಪೂರಕ ಪರೀಕ್ಷೆ
ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಭೇಟಿ ನೀಡಿದ್ದು, ಗ್ರಾಮಸ್ಥರ ಮನವಿಯನ್ನ ಜಿಲ್ಲಾಧಿಕಾರಿ ಆಲಿಸಿದರು. ರೈತರು ಸ್ಮಶಾನಕ್ಕೆ ಹೋಗಲು ಜಾಗ ಕೊಡುತ್ತಿಲ್ಲ. ಗ್ರಾಮದವರು ಒಟ್ಟಾಗಿ ಬಂದೇ ಕೂಡಲೇ ಜಮೀನು ಖರೀದಿ ಮಾಡಿ ಕೊಡುತ್ತೇವೆ. ಕಾನೂನು ರೀತಿ ಕ್ರಮ ಕೈಗೊಂಡು ಜಾಗ ಕೊಡಿಸಿ ಅಂತಾ ಗ್ರಾಮಸ್ಥರು ಪಟ್ಟು ಹಿಡಿದರು. ನಾನೇ ಬುಧವಾರ ಗ್ರಾಮಕ್ಕೆ ಬಂದು ರೈತರ ಮನವೊಲಿಸುತ್ತೇನೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದ್ರು.
ಇದನ್ನೂ ಓದಿ : – ಅಂಜನಾದ್ರಿ ಪರ್ವತಕ್ಕೆ ಮೈಸೂರಿನ ಯದುವೀರ್ ದಂಪತಿ ಭೇಟಿ