ಅತ್ತ ಶ್ರೀಲಂಕಾದಲ್ಲಿ ಆರ್ಥಿಕ ಅರಾಜಕತೆ ತಲೆದೋರಿದ್ರೆ ಇತ್ತ ಪಾಕಿಸ್ತಾನ(Pakistan)ದಲ್ಲಿ ರಾಜಕೀಯ ಅರಾಜಕತೆ ತಾಂಡವವಾಡುತ್ತಿದೆ. ಕಳೆದ ಕೆಲ ದಿನಗಳಿಂದ ಪಾಕಿಸ್ತಾನದಲ್ಲಿ ಉಂಟಾಗಿದ್ದ ಸಾಂವಿಧಾನಿಕ ಬಿಕ್ಕಟ್ಟು (Pakistan Constitutional Crisis) ಮುಂದುವರಿದಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ (Imran Khan) ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ.
ವಿರೋಧ ಪಕ್ಷಗಳ ಬಳಿ ಒಟ್ಟೂ 175 ಸಂಸದರ ಬಲವಿದೆ ಎನ್ನಲಾಗಿತ್ತು. ಮ್ಯಾಜಿಕ್ ನಂಬರ್ 172 ಇಮ್ರಾನ್ ಖಾನ್ ಬಳಿ ಇರಲಿಲ್ಲ. ಇದೇ ಕಾರಣಕ್ಕಾಗಿ, ಅಧಿಕಾರದಿಂದ ಕೆಳಗಿಳಿಯುವುದಿಲ್ಲ ಎಂದು ಖಾನ್ ಪಟ್ಟು ಹಿಡಿದಿದ್ದರು. ಪಾಕ್ ಸಂಸತ್ತಿನ ಉಪಸಭಾಪತಿ, ಇಮ್ರಾನ್ ಖಾನ್ ವಿರುದ್ಧ ನಡೆದಿದ್ದ ಅವಿಶ್ವಾಸ ಗೊತ್ತುವಳಿ ಅಸಂವಿಧಾನಿಕ ಮತ್ತು ವಿದೇಶಿ ಶಕ್ತಿಗಳು ಇದರ ಹಿಂದಿದೆ ಎಂಬ ಅಭಿಪ್ರಾಯಪಟ್ಟು, ಕಲಾಪವನ್ನು ಮುಂದೂಡಿದ್ದರು. ಹೀಗಾಗಿ ಇಮ್ರಾನ್ ಖಾನ್ ಬೀಸೋ ದೊಣ್ಣೆಯಿಂದ ಪಾರಾಗಿದ್ರು.
ಆದರೆ ಇದಾದ ಕೆಲವೇ ಕ್ಷಣಗಳ ಬಳಿಕ ಮಾತನಾಡಿರುವ ಇಮ್ರಾನ್ ಖಾನ್, ಶಾಸನ ಸಭೆಗಳನ್ನು ವಿಸರ್ಜಿಸುವಂತೆ (Dissolve Assemblies) ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯಬೇಕು ಮತ್ತು ಜನರೂ ಚುನಾವಣೆಗೆ ಸಿದ್ಧರಾಗಬೇಕು ಎಂಬ ಕರೆ ನೀಡಿದ್ದಾರೆ. ಹೀಗಾಗಿ ಪಾಕಿಸ್ತಾನದಲ್ಲಿ 90 ದಿನಗಳಲ್ಲಿ ದಿನಗಳ್ಲಲಿಚುನಾವಣೆ ನಡೆಯೋದು ಗ್ಯಾರಂಟಿ. ಆ 90 ದಿನಗಳಲ್ಲಿ ಪಾಕಿಸ್ತಾನದಲ್ಲಿ ಅರಾಜಕತೆ ನಡೆಯೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಪಾಕ್ ನ ಬೆಳವಣಿಗೆಯನ್ನ ಅಲ್ಲಿನ ಸೇನೆ ಗಮನಿಸುತ್ತಲೇ ಇದೆ. ನಾವು ಪ್ರಸಕ್ತ ರಾಜಕೀಯ ಬಿಕ್ಕಟ್ಟಿನ ಬಗ್ಬಗ್ಗೆ ಮಧ್ಯ ಪ್ರವೇಶ ಮಾಡಲ್ಲ ಅಂತ ಸೇನೆ ಹೇಳಿದೆ.
ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆಗೆ ಅಮೆರಿಕ ಕಾರಣ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಇಷ್ಟು ದಿನ ವಿದೇಶಿ ಶಕ್ತಿ ಎಂದು ಹೇಳಿದ್ದ ಇಮ್ರಾನ್ ಖಾನ್ ಈಗ ಅಮೆರಿಕ ವಿರುದ್ಧ ನೇರವಾಗಿ ವಾಕ್ಸಮರ ಮುಂದುವರಿಸಿದ್ದಾರೆ.
ವಿಪಕ್ಷಗಳ ಕುತಂತ್ರವೋ, ಅಮೆರಿಕದ ಷಡ್ಯಂತ್ರವೋ ಪಾಕಿಸ್ತಾನದಲ್ಲಿ ಇಇಮ್ರಾಇಮ್ರಾನ್ ಖಾನ್ ಮ್ರಾ ಸರ್ಕಾರ ಉರುಳಿದೆ. ಆದ್ರೆ ಇಲ್ಲಿ ಭಾರತ(India) ಗಮನಿಸಬೇಕಾದ ಅಂಶವೆಂದರೆ ಯಾವಾಗ ಪಾಕಿಸ್ತಾನದಲ್ಲಿ ಅರಾಜಕತೆ ಉಂಟಾಗಿದೆಯೋ ಆಗ ಕಾಶ್ಮೀರ(Kashmira)ದಲ್ಲಿ ತಲ್ಲಣ ಉಂಟಾಗೋದು ಗ್ಯಾರಂಟಿ. ಪಾಕ್ ಸೇನೆ ಪ್ರಮುಖವಾಗಿ ಕಾಶ್ಮೀರವನ್ನ ಗುರಿಯಾಗಿಸಿ ದಾಳಿ ಮಾಡೋದು ಚಾಳಿಯಾಗಿದೆ
ಇಮ್ರಾನ್ ಖಾನ್ ಭಾರತದ ಜೊತೆ ಉತ್ತಮ ಸಂಬಂಧ ಹೊಂದಿದ್ರು. ಇಮ್ರಾನ್ ಖಾನ್ ಭಾರತದ ಜೊತೆ ಶಾಂತಿಯನ್ನೇ ಬಯಸಿದ್ರು. ಆಗಾಗ ಭಾರತವನ್ನ ನೋಡಿ ಕಲಿಯಿರಿ ಎಂದು ಅಲ್ಲಿನ ಯುವ ಜನತೆಗೆ ಕರೆ ನೀಡುತ್ತಿದ್ರು. ಇಮ್ರಾನ್ ಖಾನ್ ಪ್ರಧಾನಿಯಾದ ಬಳಿಕ ಉರಿ, ಪುಲ್ವಾಮ ದಾಳಿಯಾಗಿದ್ದು ಬಿಟ್ರೆ ಗಡಿಯಲ್ಲಿ ಶಾಂತಿ ನೆಲೆಸಿತ್ತು. ಗುಂಡಿನ ಚಕಮಕಿ ತುಂಬಾ ಕಡಿಮೆಯಾಗಿತ್ತು. ಆದ್ರೆ ಈಗ ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದ್ದು ಸೇನೆ ಯಾವಾಗ ಅಧಿಕಾರವನ್ನ ತೆಗೆದುಕೊಳ್ಳುತ್ತೋ ತಿಳಿದಿಲ್ಲ. ಸೇನೆಗೆ ಅಧಿಕಾರ ಸಿಕ್ಕಿದ್ರೆ ಗಡಿಯಲ್ಲಿ ಮತ್ತೆ ಒಳನುಸುಳುವಿಕೆ, ಗುಂಡಿನ ಚಕಮಕಿ ನಡೆಯೋದು ಗ್ಯಾರಂಟಿ. ಹೀಗಾಗಿ ಭಾರತ ಈಗ ಪಾಕ್ ಮೇಲೆ ಹದ್ದಿನ ಕಣ್ಣು ಇಡಲೇಬೇಕಾಗಿದೆ.
ಇದನ್ನು ಓದಿ :- ಮಸೀದಿ ಸೌಂಡ್ ಬ್ಯಾನ್ ಗೆ ಮುಂದಾದ ಹಿಂದೂ ಸಂಘಟನೆಗಳು