ಪಾಕಿಸ್ತಾನ (Pakistan) ತನ್ನ ಹೆಚ್ಚುತ್ತಿರುವ ಸಾಲದ ಸೂಲದಲ್ಲಿ ಸಿಲುಕಿ ನರಳಾಡುತ್ತಿದೆ. ಸಾಲ ಪಾವತಿಸಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶ(PoK) ಗಿಲ್ಗಿಟ್-ಬಾಲ್ಟಿಸ್ತಾನ್(GB) ಅನ್ನು ಚೀನಾಕ್ಕೆ ಗುತ್ತಿಗೆ ನೀಡುವ ಸಾಧ್ಯತೆ ಇದೆ. ಈ ಕುರಿತು ಕಾರಕೋರಂ ರಾಷ್ಟ್ರೀಯ ಚಳವಳಿಯ ಅಧ್ಯಕ್ಷ ಮುಮ್ತಾಜ್ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತ್ಯೇಕವಾದ ಮತ್ತು ಪಾಕಿಸ್ತಾನದಿಂದ ನಿರ್ಲಕ್ಷಿಸಲ್ಪಟ್ಟ ಗಿಲ್ಗಿಟ್ ಬಾಲ್ಟಿಸ್ತಾನ್ (Gilgit-Baltistan) ಭವಿಷ್ಯದ ಯುದ್ಧಭೂಮಿಯಾಗಬಹುದು ಎಂದು ಶಂಕಿಸಿದ್ದಾರೆ . ಕಾಶ್ಮೀರ (KASHMIR)ದ ಉತ್ತರ ಭಾಗವು ಚೀನಾ (CHINA)ದ ಗಡಿಗೆ ಹೊಂದಿಕೊಂಡಿದೆ. ತನ್ನ ಸಾಲವನ್ನು ತೀರಿಸಲು ಪಾಕಿಸ್ತಾನವು ಯಾವುದೇ ಸಮಯದಲ್ಲಿ ಅದನ್ನು ಚೀನಾಕ್ಕೆ ಹಸ್ತಾಂತರಿಸಬಹುದು ಎಂದು ಮುಮ್ತಾಜ್ ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ, ಮುಮ್ತಾಜ್ (Mumtaz) ಅವರ ಈ ಹೇಳಿಕೆಯನ್ನು ಪಾಕಿಸ್ತಾನದ ಮಾಧ್ಯಮಗಳು ಸರಾಸಗಟಾಗಿ ತಳ್ಳಿ ಹಾಕಿವೆ. ಗಿಲ್ಗಿಟ್-ಬಾಲ್ಟಿಸ್ತಾನ್ ಅನ್ನು ಚೀನಾಕ್ಕೆ ಹಸ್ತಾಂತರಿಸಿದರೆ, ಇದಕ್ಕಾಗಿ ಚೀನಾದಿಂದ ದೊಡ್ಡ ಮೊತ್ತವನ್ನು ಪಾಕಿಸ್ತಾನ ಪಡೆಯುವ ಸಾಧ್ಯತೆ ಇದೆ. ಇದು ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾಗಲಿದೆ. ಒಂದು ವೇಳೆ ಪಾಕ್ ಇಂತ ಹೀನ ಕೃತ್ಯಕ್ಕೆ ಮುಂದಾದ್ರೆ ದೊಡ್ಡ ಹೊಡೆತ ಅನುಭವಿಸಬಹುದು. ಪಾಕ್ ಮೇಲೆ ಚೀನಾದ ಪ್ರಭಾವ ಹೆಚ್ಚಾಗುವುದನ್ನು ಅಮೆರಿಕ ಎಂದಿಗೂ ಬಯಸುವುದಿಲ್ಲ. ಐಎಂಎಫ್, ವಿಶ್ವಬ್ಯಾಂಕ್ (IMF Worldbank) ಮತ್ತು ಇತರ ಜಾಗತಿಕ ಏಜೆನ್ಸಿಗಳಿಂದ ಹಣ ಪಡೆಯುವುದರಿಂದ ನಿರೀಕ್ಷಿತ ಭವಿಷ್ಯಕ್ಕಾಗಿ ಅಮೆರಿಕ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಬಹುದು. ಇದನ್ನೂ ಓದಿ : – ‘ವರ್ಷ ‘ ಬಂಗಲೆ ಬಾಗಿಲು ನಮಗೆ ಯಾವತ್ತೂ ತೆರೆಯಲೇ ಇಲ್ಲ- ಬಂಡಾಯ ಶಾಸಕರಿಂದ ಸಿಎಂ ಉದ್ಧವ್ ಠಾಕ್ರೆಗೆ ಪತ್ರ
ಗಿಲ್ಗಿಟ್-ಬಾಲ್ಟಿಸ್ತಾನ್ ಗೆ ಕೇವಲ ಎರಡು ಗಂಟೆಗಳ ಕಾಲ ಮಾತ್ರ ಪಾಕ್ ವಿದ್ಯುತ್ ಒದಗಿಸುತ್ತಿದೆ. ಈ ಪ್ರದೇಶವು ಪಾಕಿಸ್ತಾನದ ರಾಷ್ಟ್ರೀಯ ಗ್ರಿಡ್‌ನ ಭಾಗವಾಗಿಲ್ಲ. ಇದರ ಜೊತೆಗೆ, ಹಿಂದುಳಿದ ಪ್ರದೇಶವಾಗಿರುವ ಗಿಲ್ಗಿಟ್ ಬಾಲ್ಟಿಸ್ತಾನ್ ಆಹಾರದ ಕೊರತೆಯನ್ನು ಎದುರಿಸುತ್ತಿದೆ. ಜಲವಿದ್ಯುತ್ ಅಥವಾ ಇತರ ಸಂಪನ್ಮೂಲಗಳ ಮೇಲೆ ಯಾವುದೇ ನಿಯಂತ್ರಣವನ್ನು ಈ ಭಾಗದ ನಾಗರಿಕರು ಹೊಂದಿಲ್ಲ. ಇದನ್ನೂ ಓದಿ : – ಮಹಾರಾಷ್ಟ್ರ ಶಿವಸೇನೆ ಶಾಸಕರ ಬಂಡಾಯದ ಹಿಂದೆ ಬೆಳಗಾವಿ ಸಾಹುಕಾರ್ ಕೈವಾಡವಿದ್ಯಾ…?