ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಕೂಗು ಮುನ್ನೆಲೆಗೆ ಬಂದಿದೆ. ಅದು ದಲಿತ ಸಿಎಂ ಕೂಗಿಗೆ ಕುರುಬ ಸಮುದಾಯದ ಸ್ವಾಮೀಜಿಯೊಬ್ಬರು ಧ್ವನಿಗೂಡಿಸಿದ್ದಾರೆ.
ತುಮಕೂರಿನ ಕೊರಟಗೆರೆ ತಾಲ್ಲೂಕಿನ ಸಿದ್ದರಬೆಟ್ಟದಲ್ಲಿ ಕಾಗಿನೆಲೆ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ ಡಾ.ಜಿ. ಪರಮೇಶ್ವರ್ ಸಿಎಂ ಆಗಲಿ ಎಂದು ಬ್ಯಾಟಿಂಗ್ ಮಾಡಿದ್ದಾರೆ. ಪರಮೇಶ್ವರ್ ಕರ್ನಾಟಕದಲ್ಲಿ ವಿಶೇಷವಾಗಿ ಹುದ್ದೆಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಶಿಕ್ಷಣ ಸಚಿವರಾಗಿ, ಡಿಸಿಎಂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಪ್ರತಿಭೆಗೆ ಇನ್ನು ಹೆಚ್ಚಿನ ಹುದ್ದೆ ಸಿಗಬೇಕಿತ್ತು. ರಾಜ್ಯದಲ್ಲಿ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ, ಕುರುಬ ಸಮುದಾಯದವರು ಸಿಎಂ ಆಗಿದ್ದಾರೆ. ಇದನ್ನು ಓದಿ :- ರಾಜ್ಯದಲ್ಲೂ ಮಾಸ್ಕ್ ರದ್ದು ಮಾಡೋ ಬಗ್ಗೆ ಸರ್ಕಾರ ಗಂಭೀರ ಚಿಂತನೆ
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆದರೆ ಸಾಮಾಜಿಕ ನ್ಯಾಯ ಕೊಟ್ಟಂತೆ ಆಗುತ್ತೆ. ಕನಕದಾಸರು ಹೇಳಿದಂತೆ ಸರ್ವರಿಗೂ ಸಮಪಾಲು, ಸಮಬಾಳು ಎಂಬಂತೆ ಸಾಮಾಜಿಕ ನ್ಯಾಯ ನೀಡಿದಂತೆ ಎಂದು ತಿಳಿಸಿದ್ದಾರೆ. ಪಕ್ಷ ಪರಮೇಶ್ವರ್ ಗೆ ದೊಡ್ಡ ಹುದ್ದೆ ನೀಡಿದರೆ ಪರಮೇಶ್ವರ್ ಗೌರವಿಸಿದಕ್ಕಿಂತ ಆ ಸಮುದಾಯವನ್ನು ಗೌರವಿಸುವ ವಾತಾವರಣ ನಿರ್ಮಾಣವಾಗಬೇಕು. ನಾನಿದ್ದನ್ನು ಹೇಳಿದರೆ ಯಾರೇನು ಬೇಸರ ಮಾಡಿಕೊಳ್ತಾರೋ ಗೊತ್ತಿಲ್ಲ ಎಂದು ಈಶ್ವರಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.