ಬಾಲಿವುಡ್ ನಟ ಹಾಗೂ ರಾಜಕಾರಣಿ ಪರಶ್ ರಾವಲ್ ಲಸಿಕೆ ಪಡೆದ ವಾರದಲ್ಲೇ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
65 ವರ್ಷದ ಬಿಜೆಪಿ ರಾಜ್ಯಸಭಾ ಸದಸ್ಯ ಪರೇಶ್ ರಾವಲ್ ಇತ್ತೀಚೆಗಷ್ಟೇ ಕೊರೊನಾ ಲಸಿಕೆಯ ಮೊದಲ ಡೋಜ್ ಪಡೆದಿದ್ದರು. ಶುಕ್ರವಾರ ರಾತ್ರಿ ಟ್ವಿಟ್ ಮಾಡಿರುವ ಅವರು ದುರಾದೃಷ್ಟವಶಾತ್ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಹೇಳಿಕೊಂಡಿದ್ದಾರೆ.
ಹೋಂ ಕ್ವಾರಂಟೈನ್ ಗೆ ಒಳಗಾಗಿರುವ ಪರೇಶ್ ರಾವಲ್, ನನ್ನ ಸಂಪರ್ಕದಲ್ಲಿ ಇದ್ದವರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.