ಬಿವೈ. ವಿಜಯೇಂದ್ರ ಮತ್ತು ನಮ್ಮ ಹೆಸರು ಸೇರಿದಂತೆ ನಿನ್ನೆ 20 ಹೆಸರುಗಳನ್ನು ಫೈನಲ್ ಮಾಡಿ ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಶಿಫಾರಸ್ಸು ಮಾಡಲಾಗಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಹೊಸಪೇಟೆಯಲ್ಲಿ ಮಾತನಾಡಿದ ಅವರು ನಮ್ಮ ರಾಷ್ಟ್ರೀಯ ನಾಯಕರು ಕೂಲಂಕುಷವಾಗಿ ಚರ್ಚೆ ಮಾಡಿ ತಿರ್ಮಾನ ತೆಗೆದುಕೊಳ್ಳುತ್ತಾರೆ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು, ಪಕ್ಷದ ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡ್ರು ಅತ್ಯಂತ ಸಂತೋಷದಿಂದ ಸ್ವೀಕಾರ ಮಾಡಿ ಪಾಲನೆ ಮಾಡುತ್ತೇವೆ. ನಮ್ಮಲ್ಲಿ ಆ ಪರಿಪಾಠ ಇದೆ, ಅನೇಕ ಜನರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಕೆ ಆಗಿರೋಲ್ಲಾ. ಇದನ್ನೂ ಓದಿ : – ಎರಡು ದಿನದಲ್ಲಿ ಕೇಂದ್ರ ನಾಯಕರನ್ನ ಸಂಪರ್ಕಿಸಿ ಸಂಪುಟ ವಿಸ್ತರಣೆ ಅಂತಿಮ ಗೊಳಿಸುವೆ – ಸಿಎಂ ಬೊಮ್ಮಾಯಿ
ಕಡಿಮೆ ಸಮುದಾಯ ಇರೋರು ಕೂಡ ಇರ್ತಾರೆ. ಪಕ್ಷಕ್ಕೆ ಕೆಲಸ ಮಾಡಿರ್ತಾರೆ, ಪಕ್ಷಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿರ್ತಾರೆ. ಅಂತವರನ್ನು ಪಕ್ಷ ಗುರಿತಿಸಿ ಕೆಲಸ ಮಾಡೋಕೆ ನಮ್ಮ ಪಕ್ಷ ಅವಕಾಶ ಮಾಡಿ ಕೊಡುತ್ತದೆ ಎಂದು ತಿಳಿಸಿದ್ರು.
ಇದನ್ನೂ ಓದಿ : – ಕಾಶ್ಮೀರಿ ಪಂಡಿತರ ಹತ್ಯೆಗಿಂತ ಸಿನಿಮಾ ಬಗ್ಗೆ ಮಾತಾಡೋದು ಪ್ರಧಾನಿಗೆ ಮುಖ್ಯವಾಗಿದೆ – ರಾಹುಲ್