ರೈಲಿನಲ್ಲಿ ಹೆಚ್ಚು ಲಗೇಜ್ (LUGGAGE) ಕೊಂಡೊಯ್ಯುವುದಕ್ಕೆ ಇನ್ನು ಮುಂದೆ ಹೆಚ್ಚಿನ ಹಣ (Money) ತೆರಬೇಕಾಗುತ್ತದೆ. ಹೆಚ್ಚು ಲಗೇಜ್ ಇದ್ದರೆ ಲಗೇಜ್ ಬುಕ್ ಮಾಡಬೇಕಾಗುತ್ತದೆ.
ರೈಲಿ (TRAIN)ನಲ್ಲಿ ಪ್ರಯಾಣಿಸುವಾಗ ಲಗ್ಗೇಜ್ ಕೊಂಡೊಯ್ಯಲು ಮಿತಿ ಇದ್ದರೂ, ಹೆಚ್ಚಿನ ಪ್ರಯಾಣಿಕರು (Passengers) ಹೆಚ್ಚಿನ ಲಗೇಜ್‌ನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇದು ಇತರ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ರೈಲ್ವೆ ಯಾವಾಗಲೂ ದೂರ ಪ್ರಯಾಣಕ್ಕೆ ಇರುವ ವಿಶೇಷ ಆಯ್ಕೆಯಾಗಿದೆ. ಹೆಚ್ಚು ಲಗೇಜನ್ನು ರೈಲಿನಲ್ಲಿ ನಾಗಿಸಬಹುದು.ಹಾಗಾಗಿ ಜನರು ಹೆಚ್ಚಿನ ಲಗೇಜ್ ನೊಂದಿಗೆ ದೂರ ಪ್ರಯಾಣ ಮಾಡುತ್ತಾರೆ.ಈಗಿರುವ ನಿಯಮಗಳ ಪ್ರಕಾರ, ರೈಲಿನ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು 40 ರಿಂದ 70 ಕೆಜಿಯಷ್ಟು ಲಗೇಜ್ ಅನ್ನು ಮಾತ್ರ ಸಾಗಿಸಬಹುದು.
ರೈಲ್ವೇಯ ಕೋಚ್‌ಗೆ ಅನುಗುಣವಾಗಿ ಅನುಮತಿಸುವ ಲಗೇಜ್ನ ತೂಕದ ಪ್ರಮಾಣವೂ ಕೂಡಾ ಬೇರೆ ಬೇರೆ ಆಗಿರುತ್ತದೆ.ಸ್ಲೀಪರ್(SLEEPER), ಎಸಿ ಚೇರ್ ಕಾರ್ (AC CHAIR CAR) ಮತ್ತು ಎಸಿ 3 ಟೈಯರ್ ಕೋಚ್‌ಗಳಲ್ಲಿ ಪ್ರಯಾಣಿಕರು 40 ಕೆಜಿ ವರೆಗೆ ಸಾಗಿಸಬಹುದು. 2ನೇ ಎಸಿ ಕೋಚ್‌ಗಳಲ್ಲಿ ಪ್ರಯಾಣಿಕರು 50 ಕಜಿ ಮತ್ತು 1ನೇ ಎಸಿ ದರ್ಜೆಯ ಪ್ರಯಾಣಿಕರು 70 ಕೆಜಿ ವರೆಗೆ ಸಾಗಿಸಬಹುದು. ಸಾಮಾನ್ಯ ವರ್ಗದಲ್ಲಿ ಈ ಮಿತಿ ಕೇವಲ 35 ಕೆ.ಜಿ. ಪ್ರಯಾಣಿಕರು ಹೆಚ್ಚು ಲಗೇಜ್‌ನೊಂದಿಗೆ ಪ್ರಯಾಣಿಸುತ್ತಿರುವುದು ಕಂಡುಬಂದರೆ, ಪ್ರಯಾಣದ ದೂರಕ್ಕೆ ಅನುಗುಣವಾಗಿ ವ್ಯತ್ಯಾಸವಾಗುವ ದಂಡದೊಂದಿಗೆ ಹೆಚ್ಚುವರಿ ಲಗೇಜ್‌ಗೆ ಪ್ರತ್ಯೇಕ ಶುಲ್ಕ ಪಾವತಿಸಬೇಕಾಗುತ್ತದೆ. ಇದನ್ನೂ ಓದಿ : – ಕಾಶ್ಮೀರದಲ್ಲಿ ಉಗ್ರರೇ ಹಿಂದೂಗಳ ಟಾರ್ಗೆಟ್ – ಅಮಿತ್ ಶಾ ದೋವಲ್ ಮಹತ್ವದ ಚರ್ಚೆ