ನೆನಪಿರಲಿ ಖ್ಯಾತಿಯ ಪ್ರೇಮ್ ವೃತ್ತಿಜೀವನದಲ್ಲೇ ದೊಡ್ಡ ಮೈಲುಗಲ್ಲು ಎಂಬಂತಹ ಚಿತ್ರವೊಂದಕ್ಕೆ ಸದ್ದಿಲ್ಲದೇ ಸಹಿ ಹಾಕಿದ್ದಾರೆ. ಹೌದು. 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಹಾಲಿವುಡ್ ಚಿತ್ರದಲ್ಲಿ ನಟಿಸುವ ಮೂಲಕ ಪ್ರೇಮ್ ಹೊಸ ಎತ್ತರಕ್ಕೆ ಜಿಗಿಯುವ ಉತ್ಸಾಹದಲ್ಲಿದ್ದಾರೆ.
ಭಾರೀ ಕುತೂಹಲ ಮೂಡಿಸಿರುವ ‘ಪ್ರೇಮಂ ಪೂಜ್ಯಂ’ಚಿತ್ರ ಬಿಡುಗಡೆಗೂ ಮುನ್ನವೇ ಪ್ರೇಮ್ ಹಾಲಿವುಡ್ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ವಿಶೇಷ ಅಂದರೆ ಪ್ರೇಮಂ ಪೂಜ್ಯಂ ತಂಡವೇ ಈ ಚಿತ್ರವನ್ನೂ ನಿರ್ಮಿಸುತ್ತಿರುವುದು.
ಹೌದು, ಡಾ.ರಾಘವೇಂದ್ರ ನಿರ್ದೇಶನದ ‘ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಪ್ರೇಮ್ಗೆ ನಾಯಕಿಯಾಗಿ ಐಂದ್ರಿತಾ ರೇ ಮತ್ತು ಬೃಂದಾ ಆಚಾರ್ಯ ನಟಿಸಿದ್ದಾರೆ. ಸಿನಿಮಾ ರಿಲೀಸ್ ಮುನ್ನವೇ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಪ್ರೇಮಂ ಪೂಜ್ಯಂ ಚಿತ್ರ ಬ್ಯೂಟಿಫುಲ್ ಸಾಂಗ್ಸ್ಗಳ ಮೂಲಕ ಸಿನಿರಸಿಕರನ್ನ ಮೋಡಿ ಮಾಡ್ತಿದೆ. ಪ್ರೇಮ್ ಹೊಸ ಅವತಾರ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ರು.. ಆ ಖುಷಿಯನ್ನ ದುಪ್ಪಟ್ಟು ಮಾಡಲು ಪ್ರೇಮಂ ಪೂಜ್ಯಂ ಟೀಮ್ ಸಜ್ಜಾಗಿದೆ.
ಪ್ರೇಮಂ ಪೂಜ್ಯಂ ಚಿತ್ರ ಮಾಡಿರುವ ತಂಡವೇ ಸೇರಿಕೊಂಡು ಮತ್ತೊಂದು ಚಿತ್ರ ಮಾಡಲು ಸಜ್ಜಾಗಿದ್ದಾರೆ. 400 ಕೋಟಿ ರೂ. ಬಿಗ್ ಬಜೆಟ್ ಸಿನಿಮಾದಲ್ಲಿ ವೀರ ಯೋಧನ ಪಾತ್ರದಲ್ಲಿ ಮಿಂಚಲಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್. ಈವರೆಗೂ ಮಾಡಿರದ ಭಿನ್ನ ಪಾತ್ರದಲ್ಲಿ ಪ್ರೇಮ್ ನಟಿಸುತ್ತಿರೋದ ಚಿತ್ರದ ವಿಶೇಷ.
ಡಾ.ರಾಘವೇಂದ್ರ ನಿರ್ದೇಶನದ ಎರಡನೇ ಸಿನಿಮಾ ಲವ್ಲಿ ಸ್ಟಾರ್ ಪ್ರೇಮ್ ಅವ್ರೇ ಫರ್ಫೆಕ್ಟ್ ಎಂದೇನಿಸಿ 400 ಕೋಟಿ ಬಜೆಟ್ ಸಿನಿಮಾಗೆ ಭರ್ಜರಿಯಾಗಿ ತಯಾರಿ ಮಾಡ್ಕೋತ್ತಿದ್ದಾರೆ. ತಮ್ಮ 17 ವರ್ಷದ ಕೆರಿಯರ್ನಲ್ಲಿ 25ನೇ ಸಿನಿಮಾ ಹೊಸ್ತಿಲಿನಲ್ಲಿ ನಟ ಪ್ರೇಮ್ ನಿಂತಿದ್ದಾರೆ. ಪಾತ್ರಗಳ ವಿಚಾರದಲ್ಲಿ ಸಿಕ್ಕಾಪಟ್ಟೆ ಚ್ಯೂಸಿಯಾಗಿರೋ ನಟನ ಪ್ರೇಮಂ ಪೂಜ್ಯಂ ಸಿನಿಮಾನ ಅಭಿಮಾನಿಗಳು ಜಪಿಸುತ್ತಿರೋ ಬೆನ್ನಲ್ಲೇ ಸೂಪರ್ ಗುಡ್ ನ್ಯೂಸ್ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ.
ಪ್ರೇಮಂ ಪೂಜ್ಯಂ ಸಿನಿಮಾದ ನಂತ್ರ ದೇಶ ಕಾಯುವ ನಾಡಿನ ಹೆಮ್ಮೆಯ ವೀರ ಯೋಧನ ಪಾತ್ರದಲ್ಲಿ ನಟಿಸಲು ಈಗಾಗಲೇ ಭರ್ಜರಿ ತಯಾರಿ ನಟ ಪ್ರೇಮ್ ಕಾಣಿಸಿಕೊಳ್ತಿದ್ದಾರೆ. ಚಿತ್ರದ ವಿಶೇಷ ಅಂದ್ರೆ ಈ ಹೊಸ ಪ್ರಾಜೆಕ್ಟ್ ಹಾಲಿವುಡ್ನಲ್ಲೇ ತಯಾರಾಗೋ ಚಿತ್ರವಾಗಿದ್ದು, ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಶೂಟ್ ಆಗಿ ವಿಶ್ವದ ನಾನಾ ಭಾಷೆಯಲ್ಲಿ ಡಬ್ ಆಗಲಿದೆ. ನಟ ಪ್ರೇಮ್, ರಾಘವೇಂದ್ರ ಬಿ.ಎಸ್ ಬಿಟ್ರೇ ಚಿತ್ರದಲ್ಲಿ ಕೆಲಸ ಮಾಡೋ ಎಲ್ಲರೂ ಹಾಲಿವುಡ್ ಮಂದಿ ಇರಲಿದ್ದಾರೆ.