ನಾಳೆ ಪೆಟ್ರೋಲ್ ಬಂಕ್ (Petrol bunk ) ಮಾಲೀಕರು ಮುಷ್ಕರಕ್ಕೆ (Protest) ಕರೆ ನೀಡಿದ್ದಾರೆ. ಹೀಗಾಗಿ ನಾಳೆ ಪೆಟ್ರೋಲ್ ಡಿಸೇಲ್ (Petrol -Diesel) ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ( Central government ) ಎರಡು ಬಾರಿ ಟ್ಯಾಕ್ಸ್ (Tax) ಕಡಿತ ಗೊಳಿಸಿದೆ.
ಆದರೆ ಪ್ರತಿ ಬಾರಿ ಮುನ್ನ ಖರೀದಿಸಿಟ್ಟ ತೈಲಕ್ಕೆ ನೀಡಿದ ಟ್ಯಾಕ್ಸ್ ಮರುಪಾವತಿ ಮಾಡಿಲ್ಲ. ಹೀಗಾಗಿ ಪ್ರತೀ ಡೀಲರ್ಗಳಿಗೆ 7 ರಿಂದ 8 ಲಕ್ಷ ನಷ್ಟವಾಗಿದೆ. ಬೇಡಿಕೆಗೆ ತಕ್ಕಂತೆ ಪೆಟ್ರೋಲ್, ಡಿಸೇಲ್ ಪೂರೈಕೆ ಮಾಡದ ಬಿಪಿಸಿಎಲ್ ಮತ್ತು ಹೆಚ್ಪಿಸಿಎಲ್ ಕಂಪನಿಗಳು ಅಗತ್ಯಕ್ಕೆ ಅನುಗುಣವಾಗಿ ತೈಲ ಪೂರೈಕೆ ಮಾಡುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೆಟ್ರೋಲ್ ಬಂಕ್ ಮಾಲೀಕರಿಂದ ನಾಳೆ ಮುಷ್ಕರಕ್ಕೆ ಕರೆ ನೀಡಲಾಗಿದೆ.ತೈಲ ಕಂಪನಿಗಳು ಮುಂಗಡ ಕಟ್ಟಿದ ಟ್ಯಾಕ್ಸ್ ಮರುಪಾವತಿ ಮಾಡಬೇಕು. ಈ ಹಿನ್ನಲೆ ತೈಲ ಖರೀದಿ ನಿಲ್ಲಿಸಿ ನಾಳೆ ಮುಷ್ಕರ ನಡೆಯಲಿದೆ. ಬೆಂಗಳೂರಿನ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್(Petroleum Dealers Association of Bangalore) ಸಂಪೂರ್ಣ ಬೆಂಬಲ ನೀಡಿದ್ದು, ಶೆಲ್, ನಾಯರಾ ಖಾಸಗಿ ಪೆಟ್ರೋಲಿಯಂ ಕಂಪನಿಗಳೂ ಭಾಗಿಯಾಗಲಿವೆ ಎನ್ನಲಾಗಿದೆ. ಇದನ್ನೂ ಓದಿ : – ವೇದಿಕೆಯಲ್ಲಿ ಹಾಡುವಾಗಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ಕೇರಳದ ಗಾಯಕ..!