ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ. ಈ ಮೂಲಕ ದೇಶದಲ್ಲಿ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಇಂಧನ ದರ ಜಿಗಿತ ಕಂಡಿದೆ.
ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ 25 ಪೈಸೆ ಏರಿಕೆ ಮಾಡಿ ತೈಲ ಕಂಪನಿಗಳು ಆದೇಶ ಹೊರಡಿಸಿವೆ. ಸತತ ಮೂರನೇ ದಿನ ಹಾಗೂ ಮೇ 4ರ ನಂತರ 7ನೇ ಬಾರಿ ಏರಿಕೆ ಮಾಡಿದಂತಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 92.05ರೂ.ಗೆ ಏರಿಕೆಯಾದರೆ, ಡೀಸೆಲ್ ಬೆಲೆ 82.61ರೂ.ಗೆ ಜಿಗಿತ ಕಂಡಿದೆ. ಮುಂಬೈನಲ್ಲಿ ಪೆಟ್ರೋಲ್ 98.36 ರೂ. ಹಾಗೂ ಡೀಸೆಲ್ ಬೆಲೆ 89.75 ರೂ.ಗೆ ಏರಿಕೆಯಾಗಿದೆ.