ಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮ ಕೇಸ್ ಪ್ರಕರಣದ ಕುರಿತು ಕಲಬುರಗಿಯಲ್ಲಿ ಕೆಪಿಸಿಸಿ ವಕ್ತಾರ ಶಾಸಕ ಪ್ರಿಯಾಂಕ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮರು ಪರೀಕ್ಷೆ, ಪೇಪರ್ ಒನ್ ಗಾ, ಪೇಪರ್ ೨ ಗಾ ಅಥವಾ ಫೀಜಿಕಲ್ ಗೆ ಇದೆಯಾ ? ಇದರ ಬಗ್ಗೆ ನಾನು 2 ದಿನಗಳ ಹಿಂದೆ ಕೇಳಿದ್ದೆ. ಈ ಹಿಂದೆಯೂ ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಅಂತಾ ಕೆಲ ಅಭ್ಯರ್ಥಿಗಳು ಹೇಳಿದ್ದಾರೆ.
ಪ್ರಿಯಾಂಕ ಹಿಟ್ & ರನ್ ಮಾಡ್ತಿದ್ದಾರೆ ಅಂತಾ ಬಿಜೆಪಿ ಅವರು ಹೇಳಿದ್ದಾರೆ. ದೈಹಿಕ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. ಬೆಳಗಾವಿ ೨-೮-೨೦೨೧ ರಲ್ಲಿ ಗೋಮ್ ಇಲಾಖೆ ಎಫ್ ಐ ಆರ್ ದಾಖಲು ಮಾಡಿದ್ದಾರೆ. ಬೆಳಗಾವಿಯಲ್ಲಿ ನಡೆದಿದ್ದ ಕೆ ಎಸ್ ಆರ್ ಪಿ , ಪಿಎಸ್ ಐ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಅಕ್ರಮ ಆಗಿದೆ. ಬೆಳಗಾವಿಯಲ್ಲಿ ಬಾಳೆ ಶರಣಬಸಪ್ಪ ದೂರದುಂಡಿ ಎ-೧ ಆರೋಪಿ. ಈತನ ಮೇಲೆ ಎತ್ತರದ ಆರೋಪ ಇದೆ. ತಲೆ ಮೇಲೆ 3 ಥರ್ಮಾಕೂಲ ವಿಗ್ ಹಾಕಿ ನೇಮಕಾತಿಯಲ್ಲಿ ಬರುವ ಹಾಗೆ ಮಾಡಿದ್ದಾರೆ ಅಂತಾ FIR ದಾಖಲು ಆಗಿದೆ. ಮಬೆಳಗಾವಿ ಮಾರ್ಕೆಟ್ ಸ್ಟೇಷನ್ ನಲ್ಲಿ ಎರಡನೇ ದೂರು ದಾಖಲಾಗಿದೆ. ಉಮೇಶ್ ಅನ್ನೋ ಅಭ್ಯರ್ಥಿ ಕೂಡ ಎತ್ತರ ಇಲ್ಲದಕ್ಕೆ, ತಲೆ ಮೇಲೆ ಕರಿಬಣ್ಣದ ವಿಗ್ ರೀತಿ ಹಾಕಿಕೊಂಡು ಪರೀಕ್ಷೆಗೆ ಹಾಜರಾಗಲು ಬಂದಿದ್ದರು ಅಂತಾ ದೂರು ದಾಖಲಾಗಿದೆ.ಮ ಈಗ ಕೇವಲ ಒಂದು ಪರೀಕ್ಷೆ ಕೇಂದ್ರದ ಬಗ್ಗೆ ಗಮನ ಹರಿಸಲಾಗಿದೆ ಅಷ್ಟೇ. ರಾಜ್ಯದ ಬೇರೆ ಬೇರೆ ಪರೀಕ್ಷಾ ಕೇಂದ್ರಗಳ ಬಗ್ಗೆಯೂ ತನಿಖೆ ಮಾಡಬೇಕು.ಸರ್ಕಾರದವರೇ ಹೇಳ್ತಿದ್ದಾರೆ ೨೫೦ ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಅಂತಾ. ಇದನ್ನೂ ಓದಿ :- ಬೊಮ್ಮಾಯಿಯನ್ನು ಬದಲಾಯಿಸಲು RSS ಹೊರಟಿದೆ – ಸಿದ್ದರಾಮಯ್ಯ
೫೪೫ ಜನರಲ್ಲಿ ದೈಹಿಕ ಪಾಸ್ ಆದವರು ಎಷ್ಟು ಜನ ಇದ್ದಾರೆ. ಯಾರ ಯಾರ ಮೇಲೆ ದೂರಿದೆ ಅವರ ದೈಹಿಕ ಪರೀಕ್ಷೆ ಮತ್ತೊಮ್ಮೆ ಮಾಡಿ. ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಪ್ರಶ್ನೆ ಪತ್ರಿಕೆಗಳ ಕೋಡ್ ಲೀಕ್ ಮಾಡ್ತಿದ್ದಾರೆ ಅಂತಾ ಕೆಪಿಎಸ್ ಸಿಗೆ ದೂರು ಕೊಟ್ಟಿದ್ದರು. ಈ ಅಕ್ರಮಗಳು ಪ್ರೀ ಪ್ಲ್ಯಾನ್ ಆಗಿ ನಡೆದಿರೋದು. ಈ ಪರೀಕ್ಷಾ ಕೇಂದ್ರದ ಮೇಲೆ ಆರೋಪಿಗಳು ಇದ್ದರು ಯಾಕೆ ಪರೀಕ್ಷಾ ಕೇಂದ್ರ ನೀಡಲಾಗ್ತಿದೆ. ಒಂದೆ ಪರೀಕ್ಷೆ ಕೇಂದ್ರದ ತನಿಖೆ ಮಾಡಿ, ಸರ್ಕಾರ ಈ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡ್ತಿದೆ. ಪಿಡಬ್ಲೂಡಿ, FDA/ SDA ಸೇರಿ ಬೇರೆ ನೇಮಕಾತಿ ಪರೀಕ್ಷೆ ಮೇಲೆ ಅನುಮಾನ ಬರುತ್ತಿದೆ. ದೈಹಿಕ ಪರೀಕ್ಷೆಗಳಲ್ಲೂ ಇದೊಂದು ಡೀಲಾ ? ಜ್ಞಾನ ಜ್ಯೋತಿ ಸೇಂಟರ್ ನಲ್ಲಿ ಈ ಹಿಂದೆ ನಡೆದಿರೋ ನೇಮಕಾತಿ ಪರೀಕ್ಷೆಗಳ ತನಿಖೆ ಮಾಡಬೇಕು. ಇದರ ಬಗ್ಗೆ ಸರ್ಕಾರ ಗಮನ ಕೊಡದಿದ್ರೆ ವಿದ್ಯಾರ್ಥಿಗಳ ಜೊತೆ ನಾನು ಕೂಡ ಹೋರಾಟ ಮಾಡಬೇಕಾಗುತ್ತೆ ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ :- ಕೋಲಾರದಲ್ಲಿ ಶುರುವಾದ ಅಕಾಲಿಕ ಮಳೆ – ರೈತರ ಮೊಗದಲ್ಲಿ ಮಂದಹಾಸ