ಪ್ರಧಾನಿ ನರೇಂದ್ರ ಮೋದಿ ಪುಣೆಯಲ್ಲಿ ಮೆಟ್ರೋ ರೈಲು ಸಂಚಾರವನ್ನು ಉದ್ಘಾಟಿಸಿದ್ದು, ಟಿಕೆಟ್ ಪಡೆಯುವ ಮೂಲಕ ಉದ್ಘಾಟನಾ ಸಂಚಾರಕ್ಕೆ ಚಾಲನೆ ನೀಡಿದರು.
ಭಾನುವಾರ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಿದ ಪ್ರಧಾನಿ ಗಾರೆವಾರ್ ನಿಲ್ಧಾಣದಿಂದ ಆನಂದನಗರ ನಿಲ್ದಾಣದವರೆಗೆ ಪ್ರಯಾಣಿಸಲು ಟಿಕೆಟ್ ಪಡೆದರು.
ಪುಣೆಯಲ್ಲಿ 12 ಕಿ.ಮೀ. ಉದ್ದದ ಮೆಟ್ರೋ ಯೋಜನೆಗೆ ಚಾಲನೆ ನೀಡಲಾಗಿದ್ದು, ಒಟ್ಟಾರೆ 32 ಕಿ.ಮೀ. ಉದ್ದದ ಮೆಟ್ರೋ ಯೋಜನೆ ಇದಾಗಿದೆ. ಎರಡು ಡೋಜ್ ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.