ಹುಬ್ಬಳ್ಳಿಯಲ್ಲಿ ( hubballi ) ಮಳೆಯಿಂದ ಸಂಭವಿಸಿದ ಅವಾಂತರ ಅಷ್ಟಿಷ್ಟಲ್ಲ. ಮಳೆ ಹಾನಿ ಪ್ರದೇಶಕ್ಕೆ ಪಾಲಿಕೆ ಆಯುಕ್ತ ಗೋಪಾಲಕೃಷ್ಣ (gopal krishna ) ಭೇಟಿ ನೀಡಿದ್ದಾರೆ.
ಹುಬ್ಬಳ್ಳಿಯ ಗಣೇಶ ನಗರಕ್ಕೆ ಭೇಟಿ ನೀಡಿದ ನಂತರ ಆಯುಕ್ತ ಸಮ್ಮುಖದಲ್ಲಿ ಹಲವಾರು ವರ್ಷಗಳಿಂದ ಸಮಸ್ಯೆ ಅನುಭವಿಸುತ್ತಿದ್ದೇವೆ ಎಂದು ಅಲ್ಲಿನ ನಿವಾಸಿಗಳು ಅಸಮಾಧಾನ ಹೊರಹಾಕಿದ್ದಾರೆ .ಈ ವೇಳೆ ಮಾತಾನಾಡಿದ ಆಯುಕ್ತರು ಮಳೆಯ ಸಮಸ್ಯೆ ನನಗೆ ಅರಿವಿಗೆ ಬಂದಿದೆ, ಸುಮಾರು ವರ್ಷಗಳಿಂದ ಇಲ್ಲಿನ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ.
ಆ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ ಭೇಟಿ ನೀಡಿದ್ದೇನೆ. ನಾಲಾ ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ನಾಲಾ ಕಾಮಗಾರಿ ಮುಗಿಸಲಾಗುವುದು. ಮಳೆಗಾಲಕ್ಕೂ ಮುನ್ನ ಕಾಮಗಾರಿ ಮುಗಿಸೊ ಯೋಚನೆ ಇದೆ . ಬೇಗನೆ ಮಳೆ ಆರಂಭವಾಗಿರುವುದರಿಂದ ಸಮಸ್ಯೆ ಆಗಿದೆ ಎಂದು ಕಮಿಷನರ್ ಗೋಪಾಲಕೃಷ್ಣ ಹೇಳಿದ್ದಾರೆ . ಇದನ್ನೂ ಓದಿ :- ಕೆನಡಾದ ಸಂಸತ್ ನಲ್ಲಿ ಮಾತೃಭಾಷೆಯಲ್ಲೇ ಮಾತನಾಡಿದ ಕನ್ನಡಿಗ