ಹುಬ್ಬಳ್ಳಿ ಗಲಭೆ ಪೂರ್ವ ನಿಯೋಜಿತ ಕೃತ್ಯವಾಗಿದೆ. ಹಿಂದೂಗಳನ್ನು ಭಯಬೀತಿ ಗೊಳಿಸುವ ಉದ್ದೇಶದಿಂದ ಗಲಭೆ ರೂಪಿಸಲಾಗಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಪೊಲೀಸರು ರಿಸ್ಕ್ ತೆಗೆದುಕೊಂಡು ಕಂಟ್ರೋಲ್ ಮಾಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಗರದ ಎಲ್ಲಾ ಭಾಗಗಳಿಂದ ಜನರು ಗಲಭೆಗೆ ಬಂದಿದ್ದಾರೆ. ಅಲ್ತಾಫ್ ಹಳ್ಳೂರು, ಕಿತ್ತೂರನ್ನು ಬಂಧಿಸಬೇಕು. ಇವರಿಬ್ಬರು ಕುಮ್ಮಕ್ಕು ನೀಡಿ ಇಲ್ಲಿ ನಾಟಕ ಮಾಡುತ್ತಿದ್ದಾರೆ. ಸರ್ಕಾರ ಗಲಭೆಕೋರರ ವಿರುದ್ಧ ಕೋಕಾ ಕಾಯ್ದೆ ಹಾಕಬೇಕು. ಇದನ್ನು ಓದಿ :– ಇದು ಕಾಂಗ್ರೆಸ್ ಸರ್ಕಾರ ಅಲ್ಲ, ಅವ್ರನ್ನ ಹಿಡಿ, ಇವ್ರನ್ನ ಬಿಡಿ ಎನ್ನುವುದಕ್ಕೆ – ಅರಗ ಜ್ಞಾನೇಂದ್ರ
ಘಟನೆಗೆ ರಝಾ ಅಕಾಡೆಮಿ ಸಂಘಟನೆ ಕೈಜೋಡಿಸಿದೆ. ಸರ್ಕಾರ ಗಂಡಸ್ತನ ತೋರಿಸಬೇಕು. ಕಠಿಣವಾದ ಕ್ರಮ ಜರುಗಿಸದಿದ್ದರೆ ಹಿಂದೂಗಳು ಸುಮ್ಮನೆ ಕೂರುವುದಿಲ್ಲ. ದೇವಸ್ಥಾನದ ಮೇಲಿನ ದಾಳಿ ಘಜ್ನಿ- ಗೋರಿ ಮನಸ್ಥಿತಿ ತೋರುತ್ತದೆ. ಗಲಭೆಗೆ ವಾಟ್ಸಪ್ ಸ್ಟೇಟಸ್ ಒಂದು ನೆಪ ಮಾತ್ರ. ಮಸೀದಿ ಮೇಲೆ ಭಗವದ್ವಜ ಹಾರಿಸಿದರೆ ಏನಾಗುತ್ತದೆ. ಬೆಂಗಳೂರು ಮಸೀದಿ ಮೇಲೆ ಕೇಸರಿ ಧ್ವಜ, ಕೇಸರಿ ಹಿಜಾಬ್ ಹಾಕಿಲ್ಲವೆ? ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.
ಕಾಶ್ಮೀರದಲ್ಲಿ ಮೂಡಿಸಿರುವ ಭಯ ಭೀತಿ ಇಲ್ಲಿ ಸೃಷ್ಟಿಸುವ ಹುನ್ನಾರ ನಡೆದಿದೆ. ಮಸೀದಿಗಳ ಮೇಲಿನ ಮೈಕ್ ತೆರವಿಗೆ ಸರ್ಕಾರ ಮುಂದಾಗಬೇಕು. ಮೇ 9 ರವರೆಗೆ ಕೊನೆಯ ಗಡುವು. ಮೈಕ್ ತೆರವು ಮಾಡದಿದ್ದರೆ, ನಾವು ಹಿಂದೂ ದೇವಸ್ಥಾನಗಳಲ್ಲಿ ಮೈಕ್ ಹಚ್ಚುತ್ತೇನೆ. ಅಂದು ಓಂಕಾರ, ಭಜನೆ, ಸುಪ್ರಭಾತ ಹೀಗೆ ಕಾರ್ಯಕ್ರಮಗಳು ಆರಂಭವಾಗಲಿದೆ. ಬೆಳಗ್ಗೆ 5 ಗಂಟೆಯಿಂದಲೇ ಭಕ್ತಿಗೀತೆಗಳು ಮೊಳಗಲಿವೆ. ಮಸೀದಿ ಗಳಿಗೆ ನೆಪ ಮಾತ್ರಕ್ಕೆ ನೊಟೀಸ್ ನೀಡಲಾಗಿದೆ. ಇದು ಕಣ್ಣೊರೆಸುವ ತಂತ್ರ. ಒಂದು ವೇಳೆ ಅಂದು ಬೆಳಿಗ್ಗೆ ದೇವಸ್ಥಾನಗಳ ಬಳಿ ಮೈಕ್ ತೆರವಿಗೆ ಬಂದ್ರೆ ಸುಮ್ಮನಿರಲ್ಲ. ಪೊಲೀಸರು ಮೊದಲು ಮಸೀದಿಗಳ ಬಳಿ ಹೋಗಿ ಆಮೇಲೆ ಮಂದಿರಗಳತ್ತ ಬರಲಿ ಎಂದು ತಿಳಿಸಿದ್ರು.
ಇದನ್ನು ಓದಿ :– ಉರ್ದು ಶಾಲೆ ಮುಚ್ಚುವ ಚಿಂತನೆ ಇಲ್ಲ – ಬಿ.ಸಿ ನಾಗೇಶ್