ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿಚಾರವಾಗಿ ಬಿಜೆಪಿಯ ಕೆ.ಆರ್.ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ( RAMDAS ) ಹಾಗೂ ಸಂಸದ ಪ್ರತಾಪ್ ಸಿಂಹ ( PRATHAP SIMHA ) ನಡುವೆ ಮುಸುಕಿನ ಗುದ್ದಾಟ ಮತ್ತೆ ಶುರುವಾಗಿದೆ. ಇದನ್ನು ‘BJP vs BJPʼ ಎಂದು ಟ್ವೀಟ್ ಮಾಡಿ ಕಾಂಗ್ರೆಸ್ ( CONGRESS ) ಕಾಲೆಳೆದಿದೆ.
BJP V/S BJP ಕಿಚ್ಚು ಎಷ್ಟಿದೆ ಎನ್ನಲು ಮೈಸೂರಿನಲ್ಲಿ ನಡೆಯುತ್ತಿರುವ ಪ್ರತಾಪ್ ಸಿಂಹ V/S ರಾಮದಾಸ್ ಕಾಳಗವೇ ಸಾಕ್ಷಿ. ಶಾಸಕರು ಕಟ್ಟಿಸಿದ ಬಸ್ ನಿಲ್ದಾಣವನ್ನು ಸಂಸದ ಒಡೆಯಲು ಹೊರಟಿದ್ದಾರೆ! ಬೇರೆಯವರ ಮನೆಯ ದೋಸೆಯ ತೂತನ್ನು ಹುಡುಕುವ ಬದಲು ಬಿಜೆಪಿಯವರು ತಮ್ಮ ಮನೆಯ ಕಾವಲಿಯ ತೂತನ್ನು ನೋಡಿಕೊಂಡರೆ ಒಳಿತು! ಎಂದು ಹೇಳಿದೆ. ಇದನ್ನೂ ಓದಿ : – 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಗೆ ಜಾಮೀನು
ಹಿಂದೆ ಬ್ಯಾರಿಕೆಡ್ ಮುರಿದಿದ್ದ ಸಂಸದ @mepratap ಈಗ ಮೈಸೂರಿನ ಬಸ್ ನಿಲ್ದಾಣ ಒಡೆಯುತ್ತೇನೆ ಎನ್ನುತ್ತಿದ್ದಾರೆ. ಬಸ್ ನಿಲ್ದಾಣಕ್ಕೆ ಜೆಸಿಬಿ ನುಗ್ಗಿಸುತ್ತೇನೆ ಎನ್ನುವ ಸಂಸದರ ಮನೆಗೆ ಜೆಸಿಬಿ ನುಗ್ಗಿಸಬೇಕು, ಏಕೆಂದರೆ, ಸಾರ್ವಜನಿಕ ಆಸ್ತಿ ಹಾನಿಪಡಿಸುವವರ ಆಸ್ತಿ ಮಟ್ಟುಗೋಲು ಹಾಗೂ ಜೆಸಿಬಿ ನುಗ್ಗಿಸುವುದು ಇವರದ್ದೇ ಪಕ್ಷದ ಆಗ್ರಹಗಳಲ್ಲವೇ..? ಎಂದು ಹೇಳಿದೆ.
ಇದನ್ನೂ ಓದಿ : – ಚಿತ್ರನಟಿ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ – ಟ್ಯಾಕ್ಸಿ ಚಾಲಕನ ಜೊತೆ ಕಂಪನಿಯ ಮೇಲೂ ದೂರು ದಾಖಲು