ಚಾಮರಾಜಪೇಟೆ ( chamarajpete ) ಮೈದಾನದಲ್ಲಿ ಧ್ವಜಾರೋಹಣಕ್ಕೆನೋ ಮುಹೂರ್ತ ನಿಗದಿ ಆಗಿದೆ. ಧ್ವಜಾರೋಹಣ ಇರಲಿ ಗಣೇಶೋತ್ಸವವೇ ಆಗಲಿ ವಿವಾದ ಮಾಡದಂತೆ ಶಾಸಕ ಜಮೀರ್ ಗೆ ಪಕ್ಷದಿಂದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ( d.k shivkumar ) ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ವಿವಾದ ಮಾಡಿಕೊಂಡರೆ ಪಕ್ಷ ಮುಲಾಜಿಲ್ಲದೇ ಅಂತರ ಕಾಯ್ದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎನ್ನಲಾಗುತ್ತಿದೆ. ಈದ್ಗಾ ಮೈದಾನ ಅಲ್ಲ ಕಂದಾಯ ಇಲಾಖೆಗೆ ಸೇರಿದ್ದು ಎಂದ ಮೇಲೆ ಸೈಲೆಂಟ್ ಆಗಿರಲು ಸೂಚನೆ ನೀಡಲಾಗಿದೆ. ಧರ್ಮ ರಾಜಕಾರಣದ ಸುಳಿಯನ್ನು ಬಿಡಿಸಿ ಹೇಳಿದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರು ಜಮೀರ್ ಗೆ ಯಾವುದೇ ವಿವಾದ ಮಾಡಿಕೊಳ್ಳದಂತೆ ಕಿವಿ ಮಾತು ಹೇಳಿದ್ದಾರೆ ಎನ್ನಲಾಗುತ್ತಿದೆ.
ಈದ್ಗಾ ಮೈದಾನದಲ್ಲಿ ಸರ್ಕಾರದಿಂದ ಧ್ವಜಾರೋಹಣ ಹಿನ್ನೆಲೆ ಭದ್ರತೆ ಹೆಚ್ಚಿಸಲಾಗಿದೆ. ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ( sandeep patil ) ನೇತೃತ್ವದಲ್ಲಿ ಇಂದು ಪೊಲೀಸ್ ಪಥಸಂಚಲನ ನಡೆಯಲಿದೆ. ಈ ಮಧ್ಯೆ ಆರ್.ಎಸ್.ಎಸ್ ವತಿಯಿಂದ ಈದ್ಗಾದಲ್ಲಿ ರಕ್ಷಾ ಬಂಧನ ಉತ್ಸವ ನಡೆಸಲು ನಿರ್ಧರಿಸಲಾಗಿದೆ. ತಿರಂಗಾ, ಗಣೇಶ ಹಬ್ಬ ನಡುವೆ ಆರ್ಎಸ್ಎಸ್ ರಕ್ಷಾಬಂಧನ ಉತ್ಸವ ಆಯೋಜನೆಗೆ ಹೊಸ ಸಂಘರ್ಷಕ್ಕೆ ಎಡೆ ಮಾಡಿಕೊಡಲಿದ್ಯಾ ಎಂಬ ಕುತೂಹಲ ಹೆಚ್ಚಾಗಿದೆ. ಸಂಘದ ಈ ಕಾರ್ಯಕ್ರಮಕ್ಕೆ ಅನುಮತಿ ಸಿಕ್ಕಿಲ್ಲ. ಇದನ್ನೂ ಓದಿ : – ವಿಧಾನಸೌಧದ 3ನೇ ಮಹಡಿ ಶುದ್ದವಾಗುವವರೆಗೂ ಯಾವುದೇ ತನಿಖಾ ಸಂಸ್ಥೆ ಬಂದ್ರೂ ಭ್ರಷ್ಟಾಚಾರ ನಿರ್ಮೂಲನೆ ಆಗಲ್ಲ – ಹೆಚ್ಡಿಕೆ
ಈಗಾಗಲೇ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ ಎಂದು ತೀರ್ಮಾನ ಆಗಿದೆ. ಆದರೆ ಗಣೇಶೋತ್ಸವ ಆಚರಣೆ ಕೂಗು ಮಾತ್ರ ನಿಂತಿಲ್ಲ. ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ಕೊಡಬೇಕು ಅಂತಾ ಜಿಲ್ಲಾಡಳಿತಕ್ಕೆ ಕೆಲ ಸಂಘಟನೆಗಳು ಮನವಿ ಮಾಡಿವೆ. ಅತಿ ಸೂಕ್ಷ್ಮ ವಿಚಾರ ಆಗಿರುವುದರಿಂದ ಸ್ವಾತಂತ್ರ್ಯ ದಿನಾಚರಣೆ ನಂತರ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಈ ನಡುವೆ ಇಂದು ಬೆಳಗ್ಗೆ 11ಕ್ಕೆ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಸಭೆಯಲ್ಲಿ ಬೆಂಗಳೂರು ಸಚಿವರಿಂದ ಅಭಿಪ್ರಾಯ ವ್ಯಕ್ತವಾಗುವ ಸಾಧ್ಯತೆ ಇದೆ. ಧ್ವಜಾರೋಹಣ ತೀರ್ಮಾನಕ್ಕಿಂತ ಗಣೇಶೋತ್ಸವ ಆಚರಣೆ ಇನ್ನಷ್ಟು ಸೂಕ್ಷ್ಮ ಆಗಿರುವುದರಿಂದ ಎಚ್ಚರಿಕೆಯ ಹೆಜ್ಜೆ ಇಡಲು ಸಿಎಂ ಬಸವರಾಜ ಬೊಮ್ಮಾಯಿ ( basavaraj bommai )ಮುಂದಾಗಿದ್ದಾರೆ.
ಇದನ್ನೂ ಓದಿ : – ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ವಿಧಿವಶ