ರಾಜ್ಯದ ಮತ್ತೊಂದು ಸರ್ಕಾರಿ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ (Modi) ಆಗಮಿಸಲಿದ್ದಾರೆ. ಸಾಲು ಸಾಲು ಹೈಕಮಾಂಡ್ ನಾಯಕರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಉತ್ತರ ಕರ್ನಾಟಕ ಹಳೇ ಮೈಸೂರು (Mysore) ಭಾಗದ ಮೇಲೆ ಹೈ ಅಲರ್ಟ್ ಆಗಿದೆ. ಒಂದು ಕಡೆ ಉತ್ತರ ಕರ್ನಾಟಕಕ್ಕೆ ಪದೆ ಪದೇ ಆಗಮಿಸಿ ಮತ ಸೆಳೆಯೋದಕ್ಕೆ ಪ್ಲಾನ್ ಮಾಡಲಾಗಿದೆ. ಸರ್ಕಾರಿ ಕಾರ್ಯಕ್ರಮಗಳ ಮೂಲಕ ಕಮಲ ನಾಯಕರು ಶಕ್ತಿ ಪ್ರದರ್ಶನ ತೋರಿಸುತ್ತಿದ್ದಾರೆ.
ಒಂದೇ ತಿಂಗಳಲ್ಲೇ ಎರಡು ಭಾರಿ ರಾಜ್ಯಕ್ಕೆ ಮೋದಿ ಆಗಮಿಸಿದ್ದರು. ಜನವರಿ ೧೨ ರಂದು ಹುಬ್ಬಳಿ (Hubballi) ಧಾರವಾಡ (Dharwad) ಕ್ಕೆ ಭೇಟಿ ನೀಡಿ ಯುವ ಜನೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಜನವರಿ 19 ರಂದು ಪ್ರಧಾನಿ ನರೇಂದ್ರ ಮೋದಿ ಕಲಬುರಗಿ ಯಾದಗಿರಿ ಪ್ರವಾಸ ಕೈಗೊಂಡಿದ್ದರು. ಇದೀಗ ಮತ್ತೆ ಫೆಬ್ರವರಿ 6 ರಂದು ತುಮಕೂರು (Tumakuru) ಧಾರವಾಡ ಜಿಲ್ಲೆಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಧಾರವಾಡ ಐಐಟಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ತುಮಕೂರಿನ ಗುಬ್ಬಿ ಬಳಿಯ ಹೆಚ್ ಎಎಲ್ ಹೆಲಿಕಾಪ್ಟರ್ ಘಟಕವನ್ನ ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಲಕ್ಷಾಂತರ ಜನರನ್ನ ಸೇರಿಸಲು ಬಿಜೆಪಿ ಪ್ಲಾನ್ ಮಾಡಿದೆ. ಸಾಲು ಸಾಲು ಹೈಕಮಾಂಡ್ ನಾಯಕರಿಂದ ಭರ್ಜರಿ ಪ್ರಚಾರ ನಡೆದಿದೆ. ಕಾಂಗ್ರೆಸ್ ನ ಬಸ್ ಯಾತ್ರೆ, ಜನಧ್ವನಿ ಗೆ ಪ್ರತಿತಂತ್ರ ತಯಾರಾಗಿದೆ. ಜೆಡಿಎಸ್ ನ ಪಂಚರತ್ನ ಯಾತ್ರೆಯ ಪ್ರಭಾವವನ್ನ ಜನರ ಮನಸ್ಸಲ್ಲಿ ಕಡಿಮೆ ಮಾಡೋದಕ್ಕೆ ಬಿಜೆಪಿ ಪ್ಲಾನ್ ಮಾಡಿದೆ.
ಇದನ್ನು ಓದಿ :- ಅಧ್ಯಕ್ಷ…ಅಧ್ಯಕ್ಷ…ಹಾಡಿಗೆ ಹೆಜ್ಜೆ ಹಾಕಿದ ಶ್ರೀ ರಾಮುಲು