ಮೂರು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಜರ್ಮನಿಯಿಂದ ನೇರವಾಗಿ ಡೆನ್ಮಾರ್ಕ್ಗೆ ತೆರಳಿದ್ದಾರೆ. ಅಲ್ಲಿ ಅವರು ಡೆನ್ಮಾರ್ಕ್ ಪ್ರಧಾನಿ ಮೇಟ್ ಫ್ರೆಡೆರಿಕ್ ಸೆನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ಪರಸ್ಪರ ಹಿತಾಸಕ್ತಿಯ ವಿಚಾರಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು.
ಜರ್ಮನಿಯಿಂದ ಕೂಪನ್ಹೇಗನ್ಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಸ್ವತಃ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ಫ್ರೆಡೆರಿಕ್ಸೆನ್ ಸ್ವಾಗತಿಸಿದರು. ಮೋದಿಯನ್ನ ಮರಿಯೆನ್ಬರ್ಗ್ನಲ್ಲಿರುವ ಪ್ರಧಾನಿಗಳ ಅಧಿಕೃತ ನಿವಾಸಕ್ಕೆ ಕರೆದುಕೊಂಡು ಬಂದು, ಅಲ್ಲಿ ಮಾತುಕತೆ ನಡೆಸಿದರು. ಅಧಿಕೃತ ನಿವಾಸದ ಹೊರಗಿನ ಪರಿಸರದಲ್ಲಿ ಇಬ್ಬರೂ ಅಡ್ಡಾಡುತ್ತಾ ಸಮಾಲೋಚನೆ ನಡೆಸಿದರು.
ಭಾರತ- ಯುರೋಪಿಯನ್ ಮುಕ್ತ ವ್ಯಾಪಾರ ಒಪ್ಪಂದದ ಸಂಧಾನ ಮಾತುಕತೆಗಳು ಶೀಘ್ರದಲ್ಲಿಯೇ ಅಂತ್ಯಗೊಳ್ಳಲಿದೆ ಎಂದು ಪ್ರಧಾನಿ ಮೋದಿ ಫ್ರೆಡೆರಿಕ್ಸೆನ್ ಅವರ ಜತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಭರವಸೆ ವ್ಯಕ್ತಪಡಿಸಿದರು. ಭಾರತದಲ್ಲಿ ವಿವಿಧ ವಲಯಗಳಲ್ಲಿ 200ಕ್ಕೂ ಹೆಚ್ಚು ಡ್ಯಾನಿಶ್ ಕಂಪೆನಿಗಳು ಕೆಲಸ ಮಾಡುತ್ತಿವೆ. ಭಾರತದಲ್ಲಿನ ಸುಗಮ ಉದ್ಯಮ ಪರಿಸರ ಮತ್ತು ಆರ್ಥಿಕ ಸುಧಾರಣೆಯಿಂದ ಈ ಕಂಪೆನಿಗಳು ಲಾಭ ಪಡೆಯುತ್ತಿವೆ. ಡ್ಯಾನಿಶ್ ಕಂಪೆನಿಗಳಿಗೆ ಇನ್ನಷ್ಟು ಹೂಡಿಕೆ ಅವಕಾಶಗಳು ಇವೆ ಎಂದು ತಿಳಿಸಿದರು.
ಇದನ್ನೂ ಓದಿ :- ಮಾಜಿ ಪತ್ನಿಯನ್ನೇ ಮತ್ತೊಮ್ಮೆ ಮದ್ವೆ ಆಗ್ತೀನಿ ಎಂದ ಬಿಲ್ ಗೇಟ್ಸ್