ಪಿಎಸ್ಐ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಆಡಿಯೋ ಬಿಡುಗಡೆ ಮಾಡಿದ್ದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ನೀಡಿತ್ತು. ಈ ನೋಟಿಸ್ಗೆ ನಾಲ್ಕು ಪುಟಗಳ ಸುದೀರ್ಘ ಉತ್ತರ ನೀಡಿರುವ ಪ್ರಿಯಾಂಕ್ “ನಿಮ್ಮ ನೋಟಿಸ್ ಮುಕ್ತ ಹಾಗೂ ಪಾರದರ್ಶಕ ತನಿಖೆಯ ಉದ್ದೇಶ ಹೊಂದಿಲ್ಲ” ಎಂದು ಹೇಳಿದ್ದಾರೆ.
ಗುರುವಾರ ಸಿಐಡಿ ಡಿಜಿಪಿಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ ಪ್ರಿಯಾಂಕ್ ಖರ್ಗೆ,ನಾನು ಹಗರಣದ ಕೇಂದ್ರ ಬಿಂದುವಾಗಿರುವ ಕಲಬುರಗಿ ಜಿಲ್ಲೆಯ ಜನಪ್ರತಿನಿಧಿ ಆಗಿದ್ದೇನೆ. ಜನಪ್ರತಿನಿಧಿಯಾಗಿ ಸಾರ್ವಜನಿಕ ವಲಯದಲ್ಲಿ ಇರುವ ಹಲವು ಮಾಹಿತಿಗಳು ನನಗೆ ಲಭ್ಯವಾಗುತ್ತದೆ. ಇದನ್ನು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದೇನೆ. ಈ ಮಾಹಿತಿಯನ್ನು ನೀವು ನೋಟಿಸ್ ಮೂಲಕ ತನ್ನಿಂದ ಪಡೆಯಲು ನಿರ್ಧಾರ ಮಾಡಿರುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ. ನೀವು ನೀಡಿರುವ ನೋಟಿಸ್ ಆಧಾರ ರಹಿತವಾಗಿದೆ ಹಾಗೂ ಗೊಂದಲದಿಂದ ಕೂಡಿದೆ. ನಿಮ್ಮ ಈ ನಡೆ ಅಧಿಕಾರದಲ್ಲಿರುವವರನ್ನು ತೃಪ್ತಿ ಪಡಿಸುವ ಉದ್ದೇಶದಂತೆ ಕಾಣುತ್ತಿದೆ. ನಿಮ್ಮ ನೋಟಿಸ್ ಮುಕ್ತ ಹಾಗೂ ಪಾರದರ್ಶಕ ತನಿಖೆಯ ಉದ್ದೇಶ ಹೊಂದಿಲ್ಲ.ಈ ನಡೆ ಕೇವಲ ಕಾನೂನು ಬಾಹಿರ ಮಾತ್ರವಲ್ಲ, ಕಾನೂನಿನ ದುರುಪಯೋಗವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ತನಿಖಾ ಸಂಸ್ಥೆಯಾಗಿ ಈ ಮಾಹಿತಿ ಎಲ್ಲರಿಗಿಂತ ಮೊದಲೇ ನಿಮಗೆ ದೊರಕಬೇಕಾಗಿತ್ತು. ಆದರೆ, ಹೀಗಿರುವ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ತನಿಖಾ ಸಂಸ್ಥೆ ಕಾನೂನು ಪ್ರಕಾರವಾಗಿಯೇ ಕಾರ್ಯನಿರ್ವಹಿಸಬೇಕು. ನೀವು ನನಗೆ ಸಿಆರ್ಪಿಸಿ ಸೆಕ್ಷನ್ 91 ಅಡಿಯಲ್ಲಿ ನೋಟಿಸ್ ನೀಡಿದ್ದೀರಿ.
ಈ ಸೆಕ್ಷನ್ ಅಡಿ ನೀವು ಯಾವ ನಿರ್ದಿಷ್ಟ ದಾಖಲೆಗಳನ್ನು ತನಿಖಾಧಿಕಾರಿ ಮುಂದೆ ಹಾಜರುಪಡಿಸಬೇಕು ಎಂಬುವುದನ್ನು ಆ ವ್ಯಕ್ತಿಗೆ ತಿಳಿಸಬೇಕು. ಆತ ಆ ದಾಖಲಾತಿಗಳನ್ನು ಹೊಂದಿದ್ದಾನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ :- ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಕೇಂದ್ರದ ಕುಮ್ಮಕ್ಕಿದೆ – ಸಿದ್ದರಾಮಯ್