ಮಾನ್ಯ ಗೃಹ ಸಚಿವರೇ ದಕ್ಷತೆಗೆ ಹೆಸರಾಗಿದ್ದ ಪೊಲೀಸ್ ವ್ಯವಸ್ಥೆ ನಿಮ್ಮ ಉಸ್ತುವಾರಿಯಲ್ಲಿ ಅನಗ್ಯವಾದ ಕಳಂಕ ಹೊತ್ತುಕೊಳ್ಳುತ್ತಿದೆ. ಸಾರ್ವಜನಿಕ ವಲಯದಲ್ಲಿರುವ ಆಡಿಯೋ ಕ್ಲಿಪ್ ನ ನೈಜತೆ ಯನ್ನು ದೃಢಪಡಿಸಿಕೊಳ್ಳಲಾಗದಷ್ಟು ಮಟ್ಟಿಗೆ ಸಿಐಡಿ ದುರ್ಬಲವಾಗಿದೆ ಎಂದು ಅನಿಸುವುದಿಲ್ಲ ಎಂದು ಗೃಹ ಸಚಿವರ ವಿರುದ್ದ ಟ್ವೀಟ್ ಮೂಲಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಸದನದಲ್ಲಿ, ತಾವು MLC ಎಸ್ ರವಿಯವರು ದಿನಾಂಕ 10-03-22 ರಂದು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1438ಗೆ ನೀಡಿದ್ದ ಅಧಿಕೃತ ಉತ್ತರದಲ್ಲಿ “PSI ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲಾ! ಹಿರಿಯ ಪೊಲೀಸ್ ಅಧಿಕಾರಿಗಳ ವರದಿ ನೀಡಿದ್ದಾರೆ” ಸುಳ್ಳು ಹೇಳಿದ್ದು ಯಾಕೆ? ನನಗೆ 3 ಬಾರಿ ನೋಟಿಸ್ ನೀಡಿರುವ CID, ನನಗಿಂತ ಮುಂಚೆ PSI ಪರೀಕ್ಷೆಯಲ್ಲಿ ಹಗರಣ ನಡೆದಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದ – ಸಚಿವ ಪ್ರಭು ಚವ್ಹಾಣ್ – ಪರಿಷತ್ ಸದಸ್ಯ ಸಂಕನೂರು – ಪರಿಷತ್ ಸದಸ್ಯ ಶಶಿಲ್ ನಮೋಷಿ ಯವರಿಗೆ ಇನ್ನೂ ನೋಟಿಸ್ ನೀಡಿಲ್ಲವೇಕೆ? ಇದು ಯಾವ ಸೀಮೆ ತನಿಖೆ? ಇದನ್ನೂಓದಿ : – ಯುಪಿಯಲ್ಲಿರೋದು ಯೋಗಿ ಸರ್ಕಾರ, ರಾಜ್ಯದಲ್ಲಿರೋದು ಭೋಗಿ ಸರ್ಕಾರ ಎಂದು ಬಿಜೆಪಿ ವಿರುದ್ದ ಕಿಡಿಕಾರದ ಶ್ರೀ ಸಿದ್ದಲಿಂಗ ಸ್ವಾಮೀಜಿ
ಅಂದು ನೀವು ಉಲ್ಲೇಖಿಸಿದ್ದ ವರದಿ ಕುರಿತು ನನ್ನ ಪಂಚಪ್ರಶ್ನೆ ಆ ವರದಿಯಲ್ಲೇನಿದೆ? ಈ ವರದಿ ಕೊಟ್ಟ ಅಧಿಕಾರಿಗಳು ಯಾರು? ಆ ವರದಿಯನ್ನ ಈವರೆಗೂ CIDಗೆ ಸಲ್ಲಿಸದಿರುವುದೇಕೆ? ಆ ಅಧಿಕಾರಿಗಳ ರಕ್ಷಿಸಲು ಸರ್ಕಾರ ಪಡೆಯುತ್ತಿರುವ ಕಮಿಷನ್ ಎಷ್ಟು? ನಿಮಗೆ ಅಧಿಕಾರಿಗಳು ಸುಳ್ಳು ಹೇಳಿದರೇ? ನೀವೇ ಸದನದಲ್ಲಿ ಸುಳ್ಳು ಹೇಳಿದಿರೇ? ಕಿಡಿಕಾರಿದ್ದಾರೆ. ಇದನ್ನೂಓದಿ : – ಮೇ 21ಕ್ಕೆ ನಿಗದಿಯಂತೆ ನಡೆಯಲಿದೆ ನೀಟ್ ಪಿಜಿ ಪರೀಕ್ಷೆ