ಹಿಜಬ್, ಹಲಾಲ್, ಅಜಾನ್ ಬೆನ್ನಲ್ಲೇ ಇದೀಗ ಮುಸ್ಲಿಂ ವ್ಯಾಪಾರಿಗಳ ಬಳಿ ಚಿನ್ನ ಖರೀದಿ ಮಾಡದಂತೆ ಹಿಂದೂ ಪರ ಸಂಘಟನೆಗಳು ಅಭಿಯಾನ ಶುರುವಾಗಿದೆ.
ಮೇ 3ರಂದು ಅಕ್ಷಯ ತೃತೀಯ ಹಬ್ಬವಿದ್ದು, ಈ ವಿಶೇಷ ದಿನ ಸಾಮಾನ್ಯವಾಗಿ ಜನರು ಚಿನ್ನ ಖರೀದಿಗೆ ಮುಗಿಬೀಳುತ್ತಾರೆ. ಈ ಹಿನ್ನೆಲೆ ಮುಸ್ಲಿಂ ವ್ಯಾಪಾರಿಗಳ ಬಳಿ ಚಿನ್ನ ಖರೀದಿ ಮಾಡದಂತೆ ಟ್ವಿಟ್ಟರ್ ನಲ್ಲಿ ಹಿಂದೂ ಪರ ಸಂಘಟನೆಗಳು ಅಭಿಯಾನ ಪ್ರಾರಂಭವಾಗಿದೆ. ಇದನ್ನೂ ಓದಿ :- ಕೋವಿಡ್ 4ನೇ ಅಲೆ- ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ
ಅಕ್ಷಯ ತೃತೀಯ ದಿನದಂದೇ ರಾಜ್ಯಾದ್ಯಂತ ಬರೋಬ್ಬರಿ ಒಂದು ಸಾವಿರ ಕೋಟಿ ವ್ಯಾಪಾರವಾಗು ನಿರೀಕ್ಷೆಯನ್ನು ಮಾಲೀಕರು ಹೊಂದಿದ್ದಾರೆ. ಸದ್ಯ ಶುರುವಾಗಿರುವ ಅಭಿಯಾನದಿಂದ ಯಾರಿಗೆ ನಷ್ಟ, ಯಾರಿಗೆ ಲಾಭ ಎನ್ನುವ ಲೆಕ್ಕಾಚಾರ ಆರಂಭವಾಗಿದ್ದು, ಒಂದು ವೇಳೆ ಅಭಿಯಾನ ಸಕ್ಸಸ್ ಆದರೆ, ನೂರಾರು ಕೋಟಿ ಮುಸ್ಲೀಂ ವ್ಯಾಪಾರಕ್ಕೆ ಕುತ್ತು ಬೀಳಲಿದೆ.
ಇದನ್ನೂ ಓದಿ :- ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡವೆಂದ BSY