ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಪರಿಷ್ಕೃತ ಪಠ್ಯ ಪುಸ್ತಕ ವಿವಾದ ಮತ್ತು ಅಗ್ನಿಪಥ್ (Agnipath) ಯೋಜನೆ ,ಹಲವು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಪ್ರತಿನಿತ್ಯ ಒಂದಲ್ಲ ಒಂದು ಜಿಲ್ಲೆಯಲ್ಲಿ ಪ್ರತಿಭಟನೆ ,ಧರಣಿ , ಸರ್ವೇ ಸಾಮನ್ಯವಾಗಿದೆ .
ಇಂದು ಚಿಕ್ಕಬಳ್ಳಾಪುರ (Chikkaballapura) ದ ಶಿಡ್ಲಘಟ್ಟ ವೃತ್ತದಲ್ಲಿ ಜಮಾಯಿಸಿದ ಸೌಹಾರ್ದ ಕರ್ನಾಟಕ ಸಮನ್ವಯ ಸಮಿತಿ ಒಂದು ಗಂಟೆಗಿಂತಲೂ ಹೆಚ್ಚು ಸಮಯ ರಸ್ತೆ ತಡೆದು ಪ್ರತಿಭಟನೆ ನಡೆಸಿತು. ರೋಹಿತ್ ಚಕ್ರತೀರ್ಥರ (Rohith chakrateertha) ಸಮಿತಿ ಪರಿಷ್ಕೃತ ಪಠ್ಯಪುಸ್ತಕ ವಾಪಸ್ಸು ಪಡೆದು , ಬರಗೂರು ರಾಮಚಂದ್ರಪ್ಪ (Baraguru ramachandrappa) ಸಮಿತಿ ಪಠ್ಯ ಪುಸ್ತಕ ಜಾರಿಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ರು. ಇದನ್ನೂ ಓದಿ : – ಇದನ್ನು ಓದಿ : – ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕುರಿ ಮೇಕೆ ಮಾರಾಟಕ್ಕೆ ವಿರೋಧ – ತ್ಯಾಜ್ಯ ಕ್ಲೀನ್ ಮಾಡದಿರಲು ಬಿಬಿಎಂಪಿ ನಿರ್ಧಾರ
ಚಿಕ್ಕಬಳ್ಳಾಪುರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಗಾಗಿ ವಿದ್ಯಾರ್ಥಿಗಳ ಪರದಾಟ
ಚಿಕ್ಕಬಳ್ಳಾಪುರದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಎಡವಟ್ಟಿನಿಂದ ವಿದ್ಯಾರ್ಥಿಗಳು ಒಂದು ಗಂಟೆಯಿಂದ ಬಸ್ ಗಾಗಿ ಪರದಾಡುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ನೂರಾರು ವಿದ್ಯಾರ್ಥಿಗಳು ಬಸ್ಸಿಗಾಗಿ ಕಾಯುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಬರಲಿಲ್ಲ. ಜಿಲ್ಲಾ ಕೇಂದ್ರದಿಂದ ಜಿಲ್ಲೆಯ ಹಲವು ಕಡೆ ವಿದ್ಯಾರ್ಥಿಗಳು ತೆರಳಬೇಕಾಗಿದೆ. ಇದನ್ನೂ ಓದಿ : – ಪಿಯುಸಿ ಕಾಲೇಜು ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ