ಸೂಕ್ತ ಬಸ್ (Bus) ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಪ್ರಯಾಣಿಕರು ರಾಮನಗರ (Ramnagar) ಸರ್ಕಾರಿ ಬಸ್ ನಿಲ್ದಾಣ (Government bus stand) ದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆ ಎಸ್ ಆರ್ ಟಿಸಿ ಬಸ್ (KSRTC) ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಒಂದು ಘಂಟೆಯಿಂದ ಪ್ರಯಾಣಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿನಿತ್ಯ ರಾಮನಗರದಿಂದ ಸಾವಿರಾರು ಪ್ರಯಾಣಿಕರು ಬೆಂಗಳೂರಿಗೆ ಕೆಲಸಕ್ಕೆ ಹೋಗ್ತಾರೆ. ಬೆಳಿಗ್ಗೆ 7 ಘಂಟೆಯಿಂದ ರಾಮನಗರ ಡಿಪೋ ಇಂದ ಒಂದೇ ಒಂದು ಬಸ್ ಬಿಟ್ಟಿಲ್ಲ. ಮೈಸೂರು, ಮಂಡ್ಯದಿಂದ ಬರುವಂತಹ ಬಸ್ ಗಳು ಸಂಪೂರ್ಣ ಭರ್ತಿಯಾಗಿರುತ್ತವೆ. ಅಧಿಕಾರಿಗಳನ್ನು ಕೇಳಿದ್ರೆ ಯಾವುದೇ ಪ್ರಯೋಜನವಾಗ್ತಿಲ್ಲ. ದಿನನಿತ್ಯ ಇದೇ ಪರಿಸ್ಥಿತಿ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಕಿ.ಮೀ ಅಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ.
ಇದನ್ನು ಓದಿ : – ರಾಜಕೀಯ ಬಿಟ್ಟು ಕೂಲಿ ಮಾಡ್ತೀನಿ – ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರೋ ಮಾತೆ ಇಲ್ಲ – ಮುನಿರತ್ನ