ಕರ್ನಾಟಕ ರಾಜ್ಯದಲ್ಲಿ ಸಾರಿಗೆ ಸಂಸ್ಥೆಗಳಾದ ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ಸಮಗ್ರ ಬದಲಾವಣೆ ಮುಂದಾಗಿರುವ ರಾಜ್ಯ ಸರಕಾರಕ್ಕೆ 550 ಸಲಹೆಗಳು ಬಂದಿವೆ.
ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣ ಕುರಿತು ರಾಜ್ಯ ಸರಕಾರ ಅಧ್ಯಯನ ನಡೆಸುತ್ತಿದ್ದು, ರಾಜ್ಯಾದ್ಯಂತ ಜನರು 550 ಸಲಹೆಗಳನ್ನು ರಸ್ತೆ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಕ್ಕೆ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಸಾರಿಗೆ ಕ್ಷೇತ್ರದಲ್ಲಿ ಬದಲಾವಣೆ ತರಲು ಹಲವು ಸಲಹೆಗಳನ್ನು ನೀಡಲಾಗಿದ್ದು. ಇದರಲ್ಲಿ ಜನರ ಅಭಿಪ್ರಾಯಗಳಾದ ಮಹಿಳೆಯರಿಗೆ ಉಚಿತ ಬಸ್ ಸೇವೆ, ಡಬ್ಬಲ್ ಡೆಕ್ಕರ್ ಬಸ್ ಸೇವೆ ಪುನಃ ಆರಂಭ, ಮಿನಿ ಬಸ್ ಸೇವೆ ಆರಂಭ, ಕ್ಯಾಷ್ ಲೆಸ್ ವ್ಯವಸ್ಥೆ ಜಾರಿ, ರಿಯಲ್ ಟೈಂ ಮಾಹಿತಿ ನೀಡುವುದು ಸೇರಿದಂತೆ ವಿವಿಧ ಸಲಹೆಗಳನ್ನು ನೀಡಿದ್ದಾರೆ.
550 ಸಲಹೆಗಳ ಪೈಕಿ 400 ಸಲಹೆಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿವೆ. 150 ಸಲಹೆ ಪತ್ರದ ಮೂಲಕ ಬಂದಿವೆ. ಜನವರಿ 31ರ ತನಕ ಸಲಹೆಗಳನ್ನು ಕಳಿಸಿ ಎಂದು ತಿಳಿಸಲಾಗಿತ್ತು. ಆದರೆ ಫೆಬ್ರವರಿಯಲ್ಲಿಯೂ ಸಲಹೆಗಳು ಬರುತ್ತಿವೆ ಎಂದು ಸಾರಿಗೆ ಸಂಸ್ಥೆ ಮೂಲಗಳು ಹೇಳಿವೆ.