ಲಂಡನ್ : ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಪತಿ ಪ್ರಿನ್ಸ್ ಫಿಲಿಪ್ ಇನ್ನಿಲ್ಲ. 99 ವರ್ಷದ ಪ್ರಿನ್ಸ್ ಫಿಲಿಪ್ ವಯೋಸಹಜ ಸಾವನ್ನಪ್ಪಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆ ತಿಳಿಸಿದೆ.
ಪ್ರಿನ್ಸ್ ಪಿಲಿಪ್ ಡ್ಯೂಕ್ ಆಫ್ ಎಡಿನ್ಬರ್ಗ್ ಮರಣದ ದುಃಖದ ಬಗ್ಗೆ ರಾಣಿ ಎಲಿಜಬೆತ್ ತಿಳಿಸಿದ್ದಾರೆ. ರಾಜಮನೆತನದ ರಾಜ ಫಿಲಿಪ್ ಇಂದು ಬೆಳಗ್ಗೆ ವಿಂಡ್ಸರ್ ಕ್ಯಾಸ್ಟಲ್ನಲ್ಲಿ ಶಾಂತಿಯುತವಾಗಿ ಇಹಲೋಕ ತ್ಯಜಿಸಿದ್ದಾರೆ.
ರಾಜನ ಸಾವಿನ ಬಗ್ಗೆ ಕಂಬನಿ ಮಿಡಿದಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಅನೇಕ ಯುವಜನರಿಗೆ ರಾಜ ಫಿಲಿಪ್ ಸ್ಪೂರ್ತಿಯಾಗಿದ್ದರು ಎಂದಿದ್ದಾರೆ.
ರಾಜಮನೆತದ ಕುಟುಂಬದ ಜೊತೆಗೆ ರಾಜಪ್ರಭುತ್ವ ಮುನ್ನಡೆಸಲು ರಾಜ ಫಿಲಿಪ್ ಸಹಾಯ ಮಾಡಿದ್ದರು. ಬ್ರಿಟಿಷ್ ರಾಜರುಗಳಲ್ಲಿಯೇ ಅತಿಹೆಚ್ಚು ಕಾಲ ಅಂದರೆ 69 ವರ್ಷಗಳ ಕಾಲ ಸೇವೆ ಸಲ್ಲಿಸಿ ರಾಣಿಯನ್ನು ಬೆಂಬಿಸಿದ ಪ್ರಿನ್ಸ್ ಫಿಲಿಪ್ 2017ರಲ್ಲಿ ರಾಜಮನೆತನದ ಸೇವೆಯಿಂದ ನಿವೃತ್ತಿಯಾಗಿದ್ದರು.
ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರನ್ನು ಪಿಲಿಫ್ ಅವರು 1947 ರಲ್ಲಿ ವಿವಾಹವಾಗಿದ್ದರು. ಅವರು 4 ಮಕ್ಕಳನ್ನು, 8 ಮೊಮ್ಮಕ್ಕಳನ್ನು ಹಾಗೂ 9 ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.