ಬೆಂಗಳೂರು ಉತ್ತರ ವಿವಿಯಲ್ಲಿ ( Banglore north university ) ಇವತ್ತು ನಡೆಯಬೇಕಿದ್ದ ಬಿಕಾಂ ( B .com) ಬಿಸಿಎ (BCA) ಮೊದಲ ಸೆಮಿಸ್ಟರ್ ಪರೀಕ್ಷೆಯನ್ನ(First semester exam ) ಮುಂದೂಡಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಮೊದಲ ಸೆಮಿಸ್ಟರ್ ನ ಬಿಕಾಂ, ಬಿಸಿಎ ಪರೀಕ್ಷೆ ಮುಂದೂಡಲಾಗಿದೆ.
ಬಿಕಾಂನ ಪ್ರಿನ್ಸಿಪಲ್ ಆಫ್ ಮಾರ್ಕೆಟಿಂಗ್, ಬಿಸಿಎ ಪದವಿಯ ಮ್ಯಾಥಮೆಟಿಕಲ್ ಫೌಂಡೇಶನ್ ಪತ್ರಿಕೆಗಳ ಪರೀಕ್ಷೆಯನ್ನ ಮುಂದೂಡಲಾಗಿದೆ. ಪರೀಕ್ಷೆ ರದ್ದುಪಡಿಸಿ ಬೆಂಗಳೂರು ಉತ್ತರ ವಿವಿ ಕುಲಸಚಿವರಾದ ಡಾಮಿನಿಕ್ ಆದೇಶ ಹೊರಡಿಸಿದ್ದಾರೆ. ಇದು ಮೂರನೇ ಬಾರಿಗೆ ಬೆಂಗಳೂರು ಉತ್ತರ ವಿವಿ ಪ್ರಶ್ನೆ ಸೋರಿಕೆ ಆಗ್ತಾ ಇರೋದು. ವಿದ್ಯಾರ್ಥಿಗಳು (Students ) ಪರೀಕ್ಷಾ ಕೇಂದ್ರಗಳಿಗೆ ಬಂದು ವಾಪಸ್ ಹೋಗುತ್ತಿದ್ದಾರೆ. ಇದನ್ನೂ ಓದಿ : – Rajya Sabha Election- ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈ ರಾಂ ರಮೇಶ್ ,ಮನ್ಸೂರ್ ಆಲಿ ಖಾನ್ ನಾಮಪತ್ರ ಸಲ್ಲಿಕೆ