ಕಾಂಗ್ರೆಸ್ ನ ( congress ) ಮಾಜಿ ಸಂಸದ ಮುದ್ದಹನುಮೇಗೌಡ ( Mudde gowda ) ರಾಜ್ಯಸಭೆ ಟಿಕೆಟ್ (Rajya sabha ticket ) ಕೈ ತಪ್ಪಿದ್ದಕ್ಕೆ ತೀವ್ರ ಅಸಮಾಧಾನವ್ಯಕ್ತಪಡಿಸಿದ್ದಾರೆ. ತುಮಕೂರಿನ (Tumkuru ) ಹೆಬ್ಬೂರಿನಲ್ಲಿ ಅಸಮಾಧಾನ ಹೊರಹಾಕಿದ ಮುದ್ದಹನುಮೇಗೌಡ ಒಂದು ರಾಷ್ಟ್ರೀಯ ಪಕ್ಷ ವಿನಾಶಕಾರಿ ರಾಜಕಾರಣ ಮಾಡಬಾರದು.
ರಚನಾತ್ಮಕ ರಾಜಕಾರಣ ಮಾಡಬಾರದು. ಆದ್ರೆ ಕಾಂಗ್ರೆಸ್ ವಿನಾಶಕಾರಿ ರಾಜಕಾರಣ ಮಾಡುತ್ತಿದೆ. ನಾನು ಹಾಲಿ ಸಂಸದರಾಗಿದ್ದಾಗಲೇ ನನಗೆ ಟಿಕೆಟ್ ತಪ್ಪಿಸಿದ್ರು. ದೇವೇಗೌಡರೇ (Devegowda ) ಹೇಳಿದ್ದಾರೆ ಮುದ್ದಹನುಮೇಗೌಡರನ್ನು ತುಳಿಯಲೆಂದೆ ಕಾಂಗ್ರೆಸ್ ನವರು ಬಲವಂತವಾಗಿ ನನ್ನ ತುಮಕೂರಿಗೆ ಕರೆದುಕೊಂಡು ಬಂದರು ಅಂತಾ ಎಂದು ತಿಳಿಸಿದ್ರು. ಇದರ ಹಿಂದೆ ಮುದ್ದಹನುಮೇಗೌಡರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಇದೆ ಅನ್ನೋದು ಸ್ಪಷ್ಟವಾಗಿದೆ. ಅದರ ಹಿಂದೆ ಯಾವ ನಾಯಕರಿದ್ದಾರೆ ಅನ್ನೋದು ಗೊತ್ತಿಲ್ಲ. ಒಬ್ಬರನ್ನು ತುಳಿಯುವ ಕೆಲಸ ಮಾಡಬಾರದು. ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದ್ರು. ಈ ಹಿಂದೆ ರಾಹುಲ್ ಗಾಂಧಿ (Rahul gandhi ) ಹಾಗೂ ವೇಣುಗೋಪಾಲ್ ರಾಜ್ಯಸಭೆ ಟಿಕೆಟ್ ಕೊಡುವ ಭರವಸೆ ನೀಡಿದ್ರು. ಎರಡು ಬಾರಿ ಅವಕಾಶ ಕೈ ತಪ್ಪಿಸಿದ್ರು. ಯಾವ ಮಹಾನಾಯಕನಿಂದನೂ ನನ್ನ ತುಳಿಯಲು ಸಾಧ್ಯವಿಲ್ಲ.ನನ್ನ ತುಳಿಯೋದು ಈ ಜಿಲ್ಲೆಯ ಜನರಿಂದ ಮಾತ್ರ ಸಾಧ್ಯ ಎಂದು ಗುಡುಗಿದ್ರು. ಕೆಲವರು ವಿನಾಶಕಾರಿ ರಾಜಕಾರಣ ಮಾಡುತಿದ್ದಾರೆ ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದ್ರು. ಮುಂದಿನ ಚುನಾವಣೆಯಲ್ಲಿ ನಾನು ಕುಣಿಗಲ್ನಿಂದ ಸ್ಪರ್ಧೆ ಮಾಡೋದು ಖಚಿತ ಎಂದು ಹೇಳಿದ್ರು. ಇದನ್ನೂ ಓದಿ : – ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿಗೆ ಟಿಕೆಟ್ ಫೈನಲ್