ಕೆ.ಜಿ,ಎಫ್- 2 (KGF -2 ) ನಿಜಕ್ಕೂ ಕನ್ನಡದ ಗೋಲ್ಡನ್ ಫಿಲ್ಮ್. ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಾಕ್ಸಾಫೀಸ್ ನಲ್ಲಿ ಸಖತ್ ಸೌಂಡ್ ಮಾಡ್ತಿರುವ ಚಿತ್ರ ಅನೇಕ ದಾಖಲೆಗಳನ್ನು ಬರೆದಿದೆ.
ಇಡೀ ಚಿತ್ರತಂಡ ಯಶಸ್ಸಿನಲ್ಲಿ ಮುಳುಗಿದೆ. ಈ ಯಶಸ್ಸಿನ ಬಗ್ಗೆ ನಟ ಯಶ್ ಸಂತಸ ಹಂಚಿಕೊಂಡಿದ್ದು, ಇನ್ ಸ್ಟಾ ಗ್ರಾಂನಲ್ಲಿ ವಿಡಿಯೋವೊಂದನ್ನ ಹಾಕಿದ್ದಾರೆ. ಕಥೆಯೊಂದನ್ನ ವಿವರಿಸುವ ನಟ ಯಶ್ (YASH) ಆ ಕಥೆಯ ಹುಡುಗನಿಗೆ ತಮ್ಮನ್ನ ಹೋಲಿಸಿಕೊಂಡಿದ್ದಾರೆ. ಇದನ್ನೂ ಓದಿ :- ‘ದಂಗಲ್’, ‘ಬಾಹುಬಲಿ 2’ ದಾಖಲೆಯನ್ನು ಧೂಳಿಪಟ ಮಾಡಿದ KGF 2
ಕೆಜಿಎಫ್ (KFG) ಸಿನಿಮಾವನ್ನು ಗೆಲ್ಲಿಸಿದ ನಿಮಗೆ ಧನ್ಯವಾದ ಹೇಳಿದರಷ್ಟೇ ಸಾಲದು. ಅದು ದೊಡ್ಡದಾಗುವುದಿಲ್ಲ. ಆದರೂ ನನಗೆ ತುಂಬಾ ಪ್ರೀತಿ ಮತ್ತು ಆಶೀರ್ವಾದವನ್ನು ನೀಡಿದ್ದಕ್ಕಾಗಿ ನನ್ನ ಹೃದಯಾಂತರಾಳದಿಂದ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ :- ಕೆಜಿಎಫ್ -2 ನಟಿ ಅರ್ಚನಾ ಜೋಯಿಸ್ ಜೊತೆಗೆ ಸೆಲ್ಪಿಗೆ ಮುಗಿಬಿದ್ದ ಅಭಿಮಾನಿಗಳು