ಯುವತಿ ಜೊತೆಗಿನ ಅಶ್ಲೀಲ ವೀಡಿಯೊದಲ್ಲಿ ಇರುವುದು ನಾನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಪ್ಪಿಕೊಳ್ಳಲು ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಕೇಳಿದ ಆ 5 ಪ್ರಶ್ನೆಗಳು ಕಾರಣ ಎನ್ನಲಾಗಿದೆ.
ಯುವತಿ ನೀಡಿದ ಹೇಳಿಕೆ ಹಾಗೂ ದಾಖಲೆಗಳಿಗೆ ಸೂಕ್ತ ಸಾಕ್ಷ್ಯ ಇಲ್ಲದೇ ಇದ್ದಿದ್ದು ಒಂದು ಕಡೆಯಾದರೆ ತಮ್ಮ ಬಳಿ ಇದ್ದ ಸಾಕ್ಷ್ಯಗಳನ್ನು ಬಿಟ್ಟುಕೊಟ್ಟಿದ್ದೇ ರಮೇಶ್ ಜಾರಕಿಹೊಳಿ ಒಪ್ಪಿಕೊಳ್ಳಲು ಕಾರಣ ಎಂದು ಮೂಲಗಳು ಹೇಳಿವೆ.
ಕರ್ನಾಟಕ ಭವನದಲ್ಲಿ ವಿಡಿಯೋ ಕಾಲ್ ನಲ್ಲಿ ಯುವತಿ ಜೊತೆ ಮಾತಾನಾಡಿದ್ದು, ಅಪಾರ್ಟ್ ಮೆಂಟ್ ನಲ್ಲಿ ಯುವತಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದು ತನಿಖೆ ವೇಳೆ ದೃಢಪಟ್ಟಿತ್ತು. ಘಟನೆ ದಿನ ಮತ್ತು ಸಮಯ ಇಬ್ಬರ ಟವರ್ ಲೋಕೇಷನ್ ಒಂದೇ ಕಡೆ ಇತ್ತು. ಯುವತಿ ಜೊತೆ ಮಾತನಾಡಿದ್ದ ಕಾಲ್ ಲಿಸ್ಟ್ ನಲ್ಲಿತ್ತು. ಇವೆಲ್ಲವೂ ಇವೆಲ್ಲವೂ ಕೂಡ ರಮೇಶ್ ಜಾರಕಿಹೊಳಿ ವಿರುದ್ಧವೇ ಇತ್ತು.
ಈ ಎಲ್ಲಾ ಸಾಕ್ಷಿಗಳಿಂದ ರಮೇಶ್ ಜಾರಕಿಹೊಳಿ ತಪ್ಪೊಪ್ಪಿಕೊಂಡಿದ್ದು ಇನ್ನೊಂದು ಕಡೆ ಪ್ರಕರಣ ತನಿಖೆ ನಡೆಸಿದ್ದ ತನಿಖಾಧಿಕಾರಿ, ವಿಚಾರಣೆಗೆ ಬಂದಿದ್ದ ವೇಳೆ ರಮೇಶ್ ಗೆ ಇದರ ಸಂಬಂಧ 5 ಪ್ರಶ್ನೆ ಕೇಳಿದ್ದರು. ಆ ಐದು ಪ್ರಶ್ನೆಗಳಿಗೂ ಲಾಯರ್ ಬಳಿ ಕೇಳಿ ಉತ್ತರ ನೀಡುವುದಾಗಿ ಹೇಳಿದ್ದ ರಮೇಶ್ ಜಾರಕಿಹೊಳಿ ಸಾಕ್ಷಿ ಹೊಂದಿಕೊಳ್ಳಲು ಆಗದೇ ಒಪ್ಪಿಕೊಂಡು ಯುವತಿ ಮೇಲೆ ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಸಲು ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.